ಲೂಸಿ. ಕೆ. ಸಾಲ್ಡಾನಾ ಅವರ ಕವನಗಳನ್ನು ಲೇಖಕ ವೈ.ಬಿ. ಕಡಕೋಳ ಅವರು ಸಂಪಾದಿಸಿದ ಕೃತಿ-ಒಂಟಿ ಪಯಣ. ಕವಯತ್ರಿ ಲೂಸಿ ಕೆ. ಸಾಲ್ಡಾನಾ ಅವರು ಲೇಖಕರಿಗೆ ಗುರುಮಾತೆ. ಆದ್ದರಿಂದ, ಅವರ ಕವನಗಳನ್ನು ಸಂಪಾದಿಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರಗಳು, ಮಾನವೀಯ ನಡೆ, ಬದುಕು ಸಾರ್ಥಕತೆಯ ಭಾವ ಇತ್ಯಾದಿ ಸಾಹಿತ್ಯಕ ಅಂಶಗಳಿರುವ ಕವನಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಕೃತಿಗಳು: ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...
READ MORE