ಖ್ಯಾತ ಲೇಖಕ ಪ್ರಕಾಶ ಗ. ಖಾಡೆ ಅವರು ಸಂಪಾದಿತ ಕೃತಿ ಬಾಗಲಕೋಟೆ ಹೋಳಿ. ಬಾಗಲಕೋಟೆ ಹೋಳಿ ಹಬ್ಬಕ್ಕೆ ತನ್ನದೇಯಾದ ಇತಿಹಾಸ ಮತ್ತು ಪರಂಪರೆ ಇದೆ. ಇಡೀ ದೇಶದಲ್ಲಿಯೇ ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ಬಿಟ್ಟರೆ ಐದು ದಿನಗಳ ಕಾಲ ನಡೆಯುವ ಬಾಗಲಕೋಟೆ ಹೋಳಿ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಈಗ ಗುರುತಿಸಿಕೊಂಡಿದೆ. ಬಾಗಲಕೋಟೆ ಹೋಳಿ ಕುರಿತು ಈವರೆಗೆ ಬಿಡಿ ಲೇಖನಗಳು ಮಾತ್ರ ಪ್ರಕಟವಾಗಿದ್ದವು. ಆದರೆ ಒಂದು ಪುಸ್ತಕವಾಗಿ ಲಭ್ಯವಿರಲಿಲ್ಲ ಈ ಕೊರತೆಯನ್ನು ‘ಬಾಗಲಕೋಟೆ ಹೋಳಿ : ಒಂದು ಸಾಂಸ್ಕೃತಿಕ ಅಧ್ಯಯನ’ ನೀಗಿಸುತ್ತದೆ.
ಪಾರಂಪರಿಕ ಸಂಗತಿಗಳನ್ನು ಕಟ್ಟಿಕೊಟ್ಟ ಈ ಕೃತಿಯಲ್ಲಿ ಅಮೂಲ್ಯ ಲೇಖನಗಳಿವೆ. ಪ್ರಖರ ಚಿಂತಕ ಅಣ್ಣ ರಾಮ ಮನಗೂಳಿ ಅವರ ದೀರ್ಘ ಮುನ್ನುಡಿ, ಹೇಮಾವತಿ ಎನ್. ಅವರ ಬೆನ್ನುಡಿ ಈ ಕೃತಿಗಿದೆ. ಖ್ಯಾತ ಕಾದಂಬರಿಗಾರ್ತಿ ಡಾ. ರೇಖಾ ಕಾಖಂಡಕಿ ಅವರು 'ಪ್ರಸನ್ನ ವೆಂಕಟದಾಸರು ಕಂಡ ಬಾಗಲಕೋಟೆ ಹೋಳಿ' ಲೇಖನ, ಶಾಂತಯ್ಯ ಪರಡಿಮಠರು ಬರೆದ "ಸೋಗಿನ ಬಂಡಿಗಳು', ರವಿರಾಜ ಗಲಗಲಿ ಅವರು ಬರೆದ" ಬಣ್ಣದ ಬಂಡಿಗಳು' ಮಹಾಬಳೇಶ್ವರ ಗುಡಗುಂಟಿ ಅವರ ಚರಿತ್ರಾರ್ಹ ಲೇಖನಗಳು ಹಾಗೂ ಅನೇಕ ಲೇಖಕರು ಬರೆದ ಲೇಖನಗಳು ಬಾಗಲಕೋಟೆ ಹೋಳಿ ಅಧ್ಯಯನಕ್ಕೆ ಅಮೂಲ್ಯ ಆಕರ ಒದಗಿಸುತ್ತವೆ.ಸ್ಮರಣೀಯ ಚಿತ್ರಗಳಿವೆ.
©2024 Book Brahma Private Limited.