ಬಸವಣ್ಣ ಭೋದಿಸಿದ ಸಿದ್ಧಾಂತ ಮತ್ತು ತತ್ವಗಳು ಎಂಬ ಪುಸ್ತಕವು ಚನ್ನಪ್ಪ ಎರೇಸೀಮೆ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಬಸವಣ್ಣನವರ ವೈಯಕ್ತಿಕ ಜೀವನಚರಿತ್ರೆಗೆ ಮಹಾಮೂಲ್ಯವುಂಟು. ಆ ಮೂಲ್ಯವನ್ನು ನಾವು ಬೇರೆ ಗ್ರಂಥಗಳಿಂದ ಅಳೆಯುವುದಕ್ಕಿಂತ ಹೆಚ್ಚಾಗಿ ಅವರು ಬಿಟ್ಟು ಹೋದ ಜ್ಯೋತಿಸ್ವರೂಪವಾದ ಅವರ ವಚನ ರಾಶಿಯಿಂದಲೇ ಅಳೆದರೆ ವಿಶೇಷ ಪ್ರಯೋಜನವುಂಟು, ಸಮತೆ, ವಿಶ್ವ ಬಾಂಧವ್ಯ, ವ್ಯಕ್ತಿ ಸ್ವಾತಂತ್ರ, ಸತ್ಯ, ಅಹಿಂಸೆ, ದಯಾಪರತೆ ಮೊದಲಾದ ಶ್ರೇಷ್ಠ ತತ್ತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗಪ್ರವರ್ತಕರಲ್ಲಿರುವ ಎಲ್ಲ ಗುಣಗಳನ್ನೂ ಇವರಲ್ಲಿ ಕಾಣಬಹುದು. ಅವರು ತತ್ತ್ವಜ್ಞಾನ, ದಿವ್ಯಾನುಭವ, ಆಚಾರ- ವಿಚಾರ ವಿಷಯದಲ್ಲಿ ನೀತಿಬೋಧೆಗಳನ್ನು ತಾವು ಕಂಡುಂಡು ಜನತೆಗೆ ಬೋಧಿಸಿದ್ದಾರೆ. ಅವರು ಬೋಧಿಸಿದ ಬೋಧೆಗಳು ಮಾನವ ಸಾಮಾನ್ಯವಾದುವು. ಅವರ ಸಿದ್ಧಾಂತದಲ್ಲಿ ನೂತನ ದೃಷ್ಟಿಯಿದೆ. ಹಳೆಯದೆಲ್ಲ ಸತ್ಯವೆಂಬ ಕುರುಡು ದೃಷ್ಟಿ ಅವರದಲ್ಲ. ಅನುಭವಕ್ಕೆ ನಿಲುಕದ, ಮಾನವಸಾಮಾನ್ಯವಲ್ಲದುದು ಅವರಿಗೆ ಬೇಕಿಲ್ಲ. ಇಂತಹ ವಿಚಾರಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
©2024 Book Brahma Private Limited.