`ಆನಂದ ಶಂಕರ’ ಗಿರಿಜಾ ಎಸ್ ದೇಶಪಾಂಡೆ ಅವರ ಕೃತಿಯಾಗಿದೆ. ಎಲ್ಲಾ ವಿದ್ಯಗಳಿಗೂ,ಧರ್ಮಕ್ಕೂ,ಧನಕ್ಕೂ ಇದೆ ಕಾರಣ ಎನ್ನುವಂತೆ ಪ್ರಸ್ತುತ ಆನಂದ ಶಂಕರದಲ್ಲಿ ಗಿರೀಜಮ್ಮನವರು 30 ಅಂಕಣ ಬರಹಗಳನ್ನು ಬರೆದಿದ್ದು ಧರ್ಮ ಗ್ಲಾನಿಯಾದಿಗ ಭಗವಂತನ ಅವತಾರ ಆಗುತ್ತದೆ ಎಂಬ ಗೀತೆಯ ವ್ಯಾಖ್ಯೆಯಂತೆ ಆದಿಗುರು ಶಂಕರರು ಸನಾತನ ಧರ್ಮದ ಉಳಿವಿಗಾಗಿ ಭಕ್ತಿಮಾರ್ಗದಲ್ಲಿ ನಡೆಯುವಂತೆ ಅನೇಕ ಶ್ಲೋಕಗಳನ್ನು ರಚಿಸಿ ಮನುಷ್ಯ ಜನ್ಮದ ಕುಲಕೋಟಿ ಉದ್ಧರಿಸಿದವರು.ಆದಿಗುರು ಶಂಕರ ಭಗವತ್ಪಾದರು ರಚಿಸಿದ ಸೌಂದರ್ಯ ಲಹರಿ ಲೋಕಪ್ರಸಿದ್ಧವಾದದ್ದು ದೇವಿಯ ವರ್ಣನೆ, ಅದರಿಂದ ಮನಸ್ಸಿಗೆ ಆಗುವ ಸಮಾಧಾನ.ಹಾಗೇ ಶಿವಾನಂದ ಲಹರಿಯಲ್ಲಿ ಪ್ರಕೃತಿ ಪುರುಷದ ಕುರಿತು ವಿವರವಾಗಿ ಹೇಳಿರುವುದನ್ನು ಅಂಕಣ ಬರಹರೂಪದಲ್ಲಿ ಸಾಧಕನಿಗೆ ಸಾಧನ ಮಾರ್ಗಸೂಚಿಯಂತೆ ಪ್ರಸ್ತುತ ಕೃತಿಯಲ್ಲಿ ಬರೆದಿದ್ದಾರೆ. ಈ ಕೃತಿಯಲ್ಲಿ ಅವರು ದೃಷ್ಟಾಂತಗಳನ್ನು ಸಹ ವಿವರಿಸಿದ್ದಾರೆ.ಧಾರ್ಮಿಕ ಕೃತಿಗಳಲ್ಲಿ ಗಿರೀಜ ಅಮ್ಮ ಅವರು ಬರೆದಿರುವ ಆನಂದ ಶಂಕರ ಕೃತಿ ಸಂಗ್ರಹದ ಜೊತೆಗೆ ಜ್ಞಾನದ ಸೌಂದರ್ಯವನ್ನು ಹೆಚ್ಚಿಸುವ ಕೃತಿಯಾಗಿದೆ.
©2024 Book Brahma Private Limited.