ಹಿರಿಯ ವಿದ್ವಾಂಸ ಎನ್. ರಂಗನಾಥಶರ್ಮಾ ಅವರ ‘ವ್ಯಾಸ ರಹಸ್ಯ’ ಕೃತಿಯು ವ್ಯಾಸ ಮಹರ್ಷಿಗಳ ಕುರಿತ ಶ್ಲೋಕಗಳ ಬರವಣಿಗೆಯಾಗಿದೆ. ಕವಿಯ ಬುದ್ಧಿಕೌಶಲವನ್ನೂ ಶ್ಲೋಕರಚನಾ ಸಾಮರ್ಥ್ಯವನ್ನು ಪ್ರತಿಬಿಂಬಿಸತಕ್ಕವು. ಇನ್ನು ಪ್ರಹೇಲಿಕಾ, ಸಮಸ್ಯಾಪೂರಣ, ಅಂತರಾಲಾಪ ಬಹಿರಾಲಾಪ, ಅಕ್ಷರಚ್ಯುತಕ, ಮಾತ್ರಾಚ್ಯುತಕ, ಬಿಂದುಮತೀ ಮೊದಲಾದ ಚಮತ್ಕಾರ ವಿಶೇಷಗಳು ಒಂದು ಬಗೆಯ ಕ್ರೀಡೆಗಳು, ಚದುರಂಗ, ಪಗಡೆಯಾಟ - ಮೊದಲಾದವುಗಳಂತೆ ಶಬ್ದಸಂಪತ್ತುಗಳಿಂದಾಡುವ ಆಟಗಳು ಇಲ್ಲಿವೆ. ಈ ವ್ಯಾಸರಹಸ್ಯದಲ್ಲಿ ಬರೆದವುಗಳನ್ನು ಕೂಟಪದ್ಯಗಳೆನ್ನಬಹುದು. ಅಪ್ರಸಿದ್ಧಪದ, ಶ್ಲೇಷ, ವ್ಯಾಕರಣಬಲದಿಂದ ಹೊಸದಾಗಿ ಕಲ್ಪಿಸಿದ ಪದ -ಇತ್ಯಾದಿ ಬಳಕೆಯಿಂದ ಶ್ರೋತೃವಿಗೆ ಅರ್ಥಮಾಡಿಕೊಳ್ಳಲು ತುಂಬ ಕ್ಲೇಶವನ್ನು ಕೊಡುವ ಪದ್ಯಗಳಾಗಿವೆ.
ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ. ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...
READ MORE