ನಡಕೇರಿಯಂಡ ಚಿಣ್ಣಪ್ಪ ಇವರು ಮೂಲತಃ ಪೋಲಿಸ್. ತನ್ನ ವೃತ್ತಿ ನಿವೃತಿಯ ನಂತರ ಸಹಕಾರ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡು ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಕೊಡವ ಸಾಹಿತ್ಯಕ್ಕೆ ಕನ್ನಡಕ್ಕೆ ಇದ್ದಂತೆ ತನ್ನದೇ ಆದ ಲಿಪಿ ಇಲ್ಲದಿದ್ದರೂ ಸಹ ಅನೇಕ ಕೃತಿಗಳು ರಚನೆಯಾಗಿದೆ.’ ಭಗವಂತಂಡ ಪಾಟ್’ ಈ ಕೃತಿಯು ಕೂಡ ಇದೇ ಕೊಡವ ಸಾಹಿತ್ಯದಲ್ಲಿ ರಚನೆಯಾದದ್ದು. ಈ ಕೃತಿಯಲ್ಲಿ ’ಭಗವದ್ಗೀತೆ’ಯ ಒಟ್ಟು ಸಾರಾಂಶವನ್ನು ಕಟ್ಟಿಕೊಟ್ಟಿದ್ದಾರೆ.