ಅಮೇರಿಕದ ಚಿಕಾಗೋದ ಅನಿವಾಸಿ ಭಾರತೀಯ ಶ್ರೀ ಶ್ರೀಶೈಲಕುಮಾರ ಹಾದಿಮನಿ ಅವರ ಬಳಿಯಿದ್ದ ಉಮ್ಮತ್ತೂರು ದೂರ ವೀರನಂಜಾರ್ಯೊಡೆಯರವರು 1502ರಲ್ಲಿ ಸಂಕಲಿಸಿದ ಗುರು ಬಸವಣ್ಣನವರ 958 ಷಟ್ ಸ್ಥಲ ವಚನಗಳಿರುವ 294 ತಾಡೋಲೆಗಳ ಗರಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಡಿಜಿಟಲೀಕರಣದ ಈ ತಾಡೋಲೆ ಕಟ್ಟಿನಲ್ಲಿ ಮಹೇಶ್ವರ ಸ್ಥಲದ 214 ರಿಂದ 230 ರವರಿಗೂ ವಚನಗಳ ಗರಿಗಳು ಕಳೆದು ಹೋಗಿದೆ. ಪುಟಗಳ ಎಡಭಾಗದಲ್ಲಿ ವಚನಗಳಿರುವ ತಾಡೋಲೆ ಗರಿಯ ಚಿತ್ರ ಬಲಭಾಗದಲ್ಲಿ ಅದೇ ವಚನಗಳಿಗೆ ಹೊಸಗನ್ನಡದ ಲಿಪಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಕನ್ನಡ ಸಾಹಿತ್ಯದಲ್ಲಿಯೇ ಇದು ವಿನೂತನ ಪ್ರಯೋಗವಾಗಿದ್ದೂ, ಇದೇ ಮಾದರಿಯಲ್ಲಿ ಇತರ ಶಿವಶರಣರ ವಚನಗಳನ್ನು ಮಾಡುವ ಯೋಜನೆಯಿದೆ. ವಚನಸಾಹಿತ್ಯ ಶರಣಧರ್ಮದ ಧರ್ಮಗ್ರಂಥವಾಗಿದ್ದೂ, ಪ್ರಾಚೀನ ತಾಡೋಲೆ ರೂಪದಲ್ಲಿ ಈ ಗ್ರಂಥವನ್ನು ಮುದ್ರಿಸಲಾಗಿದ್ದೂ, ಹೊಸದಾಗಿ ಪ್ರಾಚೀನ ಲಿಪಿ ಅಭ್ಯಾಸ ಮಾಡುವವರಿಗೆ ಸಹಕಾರಿಯಾಗಲಿದೆ.
©2024 Book Brahma Private Limited.