ಲಕ್ಷ್ಮೀರಮಣ ಕೃತಿಮಂಜರಿ ಎಂಬುದು ಪ್ರೊ. ಆರ್.ಎನ್.ಡಿ. ಅವರ ಗೇಯ ರಚನೆಗಳ ಮೊದಲ ಸಂಪುಟ. 1989ರಲ್ಲಿ ಪ್ರಕಟವಾಯಿತು. 66 ರಚನೆಗಳಿವೆ. ಅವರು 1989ರ ನಂತರ ರಚಿಸಿದ 27 ಗೇಯರಚನೆಗಳು ಈ ಎರಡನೆಯ ಸಂಪುಟದಲ್ಲಿವೆ. ಕಲಾವಿದ, ಅಧ್ಯಾಪಕ, ಸಂಘಟಕರಾಗಿದ್ದ ಆರ್.ಎನ್.ಡಿ. ವಿವಿಧ ರಾಗಗಳಲ್ಲಿ ವಿವಿಧ ದೇವತೆಗಳನ್ನು ಕುರಿತು ಕೃತಿಗಳನ್ನು ರಚಿಸಿದ್ದಾರೆ. ತಾನವರ್ಣ, ಪದವರ್ಣ, ದೇವರನಾಮ, ರಾಗಮಾಲಿಕೆ, ಜಾವಳಿ, ಸ್ತೋತ್ರಗೀತೆ, ಹಿಂದಿ ಭಜನೆ ಕೂಡ ಸೇರಿವೆ. ಲೇಖಕ ಪ್ರಣತಾರ್ತಿ ಹರನ್ ಸಂಪಾದಿಸಿದ್ದಾರೆ.
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...
READ MORE