‘ಭಾವರಾಮಾಯಣ ರಾಮಾವತರಣ’ ಶ್ರೀ ಸಂಸ್ಥಾನ ರಾಮಚಂದ್ರ ಮಠದ ಕೃತಿಯಾಗಿದೆ. ಇದು ವಾಲ್ಮೀಕಿ ರಾಮಾಯಣದ ಪುನಃಕಥನ. ರಾಮನ ಜನನದ ತನಕದ ಕಥಾನಕ ಇಲ್ಲಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ವಾಲ್ಮೀಕಿಗಳ ಭಾವವನ್ನು ಹಿಡಿದು ಅದನ್ನು ಹೊರಹೊಮ್ಮಿಸುತ್ತಾ ಸಾಗುವ ಅನುಪಮ ಕಥಾ ಕಥನ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಸಂಯೋಜಿಸುತ್ತಾ, ಮೂಲದಲ್ಲಿ ಹಂಚಿದಂತಿರುವ ಅಂಶಗಳನ್ನು ಒಂದೆಡೆ ಜೋಡಿಸುತ್ತಾ, ತ್ರೇತಾಯುಗದ ಮಹಾಪುರುಷರ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ. ಇದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ; ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾಲಹರಿಯ ಪುನರನುಸಂಧಾನ; ಶ್ರೀರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ.
ರಾಘವೇಶ್ವರ ಭಾರತೀ ಶ್ರೀಸಂಸ್ಥಾನ ಶ್ರೀರಾಮಚಂದ್ರಪುರ ಮಠದ 35ನೇ ಪೀಠಾಧಿಪತಿಗಳಾಗಿದ್ದಾರೆ. ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀರಾಮಚಂದ್ರಪುರ ಮಠವು ಹೊಸನಗರ ತಾಲೂಕಿನ ಕಾರಣಗಿರಿಯ ಸನಿಹದ ರಾಮಚಂದ್ರಾಪುರದಲ್ಲಿದೆ. ರಾಘವೇಶ್ವರ ಭಾರತೀ ಶ್ರೀಗಳು ಸಾಹಿತ್ಯಾಸಕ್ತರಾಗಿದ್ದು ವಾಲ್ಮೀಕಿ ರಚಿತ ರಾಮಾಯಣವನ್ನು ಅವರು ಮತ್ತೆ ಬರೆದಿದ್ದಾರೆ. ಇವರು ಬರೆದಿರುವ ರಾಮಾಯಣದ ಹೆಸರು, ‘ಭಾವರಾಮಾಯಣ’. ಈ ಬ್ರಹದ್ಗ್ರಂಥದ ಮೊದಲ ಕೃತಿ ‘ರಾಮಾವತರಣ”. ...
READ MORE