ಪುರಾಣದ ರೂಪಕಗಳು

Author : ಯೋಗೇಶ್ ಮಾಸ್ಟರ್‌

Pages 190

₹ 150.00




Year of Publication: 2015
Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
Address: 899, ರಜತಾದ್ರಿ, 19ನೇ ಮುಖ್ಯರಸ್ತೆ, ಜ್ಞಾನಭಾರತಿ ಎರಡನೇ ಹಂತ, ಮರಿಯಪ್ಪನ ಪಾಳ್ಯ, ಬೆಂಗಳೂರು. 560056
Phone: 8880660347

Synopsys

ಪ್ರಗತಿಪರ ಚಿಂತಕ ಯೋಗೇಶ್ ಮಾಸ್ಟರ್ ಅವರು ಗೌರಿ ಲಂಕೇಶ್ ಪತ್ರಿಕೆಯ ’ಪುರಾಣದ ಹೂರಣ’ ಎಂಬ ಅಂಕಣಕ್ಕೆ ಬರೆದ ಲೇಖನಗಳಲ್ಲಿ ಅಯ್ದ ಬರಹಗಳು ಈ ಪುಸ್ತಕದಲ್ಲಿದೆ. ಇಲ್ಲಿನ ಲೇಖನಗಳಲ್ಲಿನ ದನಿಯು ಒಂದು ನೆಲೆಗಟ್ಟಿನ ಅಲೋಚನೆಗಳಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚಿಂತನೆಗಳನ್ನು ನಡೆಸಲು ಪ್ರೇರೇಪಿಸುವಂತಿವೆ.

ನಮ್ಮ ಸಮಾಜದಲ್ಲಿ ಎರಡು ಬಗೆಯ ಜನರನ್ನು ನೋಡುತ್ತೇವೆ. ಒಬ್ಬರು ಪುರಾಣದ ಕಥೆಗಳನ್ನು ನೇರಾನೇರ ಒಪ್ಪಿಕೊಳ್ಳುವವರಾದರೆ, ಇನ್ನೊಬ್ಬರು ನಿರಾಕರಿಸುವವರು. ಆದರೆ ಎರಡರ ನಡುವಿನ ದಾರಿ ಎಂದರೆ ಪುರಾಣವನ್ನು ವಿಶ್ಲೇಷಿಸುವುದು. ಪುರಾಣಗಳೆಂಬ ರೂಪಕಗಳಲ್ಲಿ ಅಡಗಿರುವ ಗತಕಾಲದ ಸತ್ಯವನ್ನು ಗ್ರಹಿಸಲು ಯತ್ನಿಸುವುದು. ಈ ನಿಟ್ಟಿನಲ್ಲಿ ’ಪುರಾಣದ ರೂಪಕಗಳು’ ಕೃತಿ ಮುಖ್ಯವೆನಿಸುತ್ತದೆ.

’ಪುರಾಣದ ರೂಪಕಗಳು’, ’ದೇವರಾಗುವುದು, ದೇವರನ್ನು ಮಾಡುವುದು: ಒಂದು ತಂತ್ರ’,  ’ಗಣಪತಿ ಬಂಡಾಯದ ದಳಪತಿ’, ’ವಿನಾಯಕ ಕೇಡಿನ ಅಪರಾವತಾರ’, ’ಕೃಷ್ಣನೂ ಒಬ್ಬ ಅಸುರ’, ’ಸನಾತನವಲ್ಲದ ಹಿಂದೂ ಧರ್ಮ’, ’ಭಾಗ್ಯದ ಲಕ್ಷ್ಮೀ ಬಾರಮ್ಮ’, ’ಗೊಡ್ಡು ಪುರಾಣದ ವೈಜ್ಞಾನಿಕ ಅಸ್ತ್ರ’, ’ಕುಂಡಲಿನಿ ಸಿಂಡ್ರೋಮ್’ ಮುಂತಾದ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE

Related Books