ಸೂಫಿಗಳಲ್ಲಿ ಮುಖ್ಯವಾಗಿ ಇಸ್ಲಾಂ ಧರ್ಮ ತತ್ತ್ವ ಸಿದ್ಧಾಂತಗಳನ್ನು ಆಧ್ಯಾತ್ಮಿಕ ಸಾಧನೆಯಲ್ಲಿ ಬಳಸಿಕೊಳ್ಳಲು ಸರಳ ಮಾರ್ಗಗಳಿವೆ. ದೇವರ ಅಸ್ತಿತ್ವ, ಸ್ವರೂಪ, ಮಹತ್ವ ಅವನನ್ನು ಕೂಡಿಕೊಳ್ಳುವುದೇ ಅಂತಿಮ ಗುರಿ, ಆ ಗುರಿಯನ್ನು ತಲುಪುವಲ್ಲಿ ಅನುಸರಿಸಬೇಕಾದ ಮಾನಸಿಕ ಮತ್ತು ದೈಹಿಕ ಸ್ಥಿರತೆಯ ಆಚರಣೆಗಳು ಇವೇ ಮುಂತಾದ ವಿಚಾರಗಳನ್ನು ಸರಳವಾಗಿ ಅವರು ನಿರೂಪಿಸುತ್ತಾರೆ. ದಕ್ಷಿಣ ಭಾರತದಲ್ಲಿ ನಿಜಾಮನ ಕಾಲದಲ್ಲಿ ಸೂಫಿಗಳಿಗೆ ರಾಜಾಶ್ರಯವಿತ್ತು. ಕಲ್ಯಾಣ ಕರ್ನಾಟಕ ಆಗ ಹೈದ್ರಾಬಾದ ನಿಜಾಮರ ಆಡಳಿತದಲ್ಲಿ ಇದ್ದುದ್ದರಿಂದ ಜಗತ್ತಿನಾದ್ಯಂತ ಇರುವ ಮುಸ್ಲಿಂ ಬಾಂಧವರ ಸಂಪರ್ಕ ಇಲ್ಲಿಗೆ ಉಂಟಾಯಿತು.ಗುಲಬರ್ಗಾದ, ಸಂತ ಹಜರತ್ ಖಾಜಾ ಬಂದೇ ನವಾಜ ಅವರ ಕಾಲದಲ್ಲಿ ಸೂಫಿಗಳ ಸಮೂಹವೇ ಈ ನಾಡಿನಲ್ಲಿತ್ತು.
ಶಿವಶರಣರ ಮತ್ತು ಸೂಫಿಗಳ ವಿಚಾರಧಾರೆಗಳಲ್ಲಿ ಅನೇಕ ಸಮಾನ ಅಂಶಗಳಿದ್ದುದರಿಂದ ಸೂಫಿಗಳ ಮೇಲೆ ಶರಣರ ಭಕ್ತಿ ತತ್ವರತ, ವೈಚಾರಿಕತೆಯ ಪ್ರಭಾವ ಉಂಟಾಯಿತು. ಹಜರತ್ ಶ್ವಾಜಾ ಮೊಯಿನುದ್ದೀನ ಚಿತ್ತಿ ಹಾಗೂ ಹಜರತ್ ಪ್ಲಾಜಾ ಬಂದೇ ನವಾಜರು ಕಲಬುರ್ಗಿಯಲ್ಲಿ ಇದ್ದು ಸಾಹಿತ್ಯವನ್ನು ಇಡೀ ಏಶಿಯಾಖಂಡ ಪ್ರಸಾರಮಾಡಿದರು. ಹನ್ನೆರಡನೇ ಶತಮಾನ ಹಾಗೂ ನಂತರದ ಕಾಲದ ಶಿವಶರಣರು, ಆರೂಢರು, ದಾಸರು ಮುಂತಾದವರು ಪ್ರಾಯ: ಸೂಫಿಸಂತರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದಾರೆ. ಹಾಗೆಯ: ಮುಸಲ್ಮಾನ ಅನುಭಾವಿಗಳು ಉತ್ತರಕರ್ನಾಟಕದಲ್ಲಿ ಹುಟ್ಟಿಕೊಳ್ಳಲು ಶಿವಶರಣರು ಮತ್ತು ವೀರಶೈವ ಮಠಾಧೀಶರು ಕಾರಣರಾಗಿದ್ದಾರೆ. ಅಲ್ಲದೆ ಈ ಭಾಗದ ಅನೇಕ ವೀರಶೈವ ಮಠಗಳಲ್ಲಿ ಹಿಂದೂ ಮುಸ್ಲಿಮ್ ಭಾವೈಕ್ಯಕ್ಕೆ ಸಂಬಂಧಿಸಿದಂತೆ ಅನೇಕ ಆಚರಣೆಗಳು, ವಾಸ್ತುಶಿಲ್ಪ, ಸಾಹಿತ್ಯ ಮುಂತಾದವುಗಳು ಗೋಚರವಾಗುತ್ತಿವೆ. 11 ಶಿವಶರಣರು ಮತ್ತು ಸೂಫಿಗಳ ಸಾಹಿತ್ಯವನ್ನು ಮತಾಚರಣೆಗಳನ್ನು ತುಲನಾತ್ಮಕವಾಗಿ ಹೈದ್ರಾಬಾದ ಕರ್ನಾಟಕದ ಹಿರಿಯ ಚಿಂತಕ ಸಾಹಿತಿ ಶ್ರೀ ರೇವಣಸಿದ್ದಯ್ಯ ರುದ್ರಸ್ವಾಮಿಮಠ ಅವರು ಅಧ್ಯಯನ ಮಾಡಿ ಬರೆದ ಅಪರೂಪದ ಈ ಕೃತಿಯನ್ನು ಸಮನ್ವಯಮಠವೆಂದೇ ಪ್ರಸಿದ್ದಿ ಪಡೆದ ಶ್ರೀ ಹಾರಕೂಡ ಸಂಸ್ಥಾನ ಹಿರೇಮಠ ಪ್ರಕಟಿಸಿದೆ.
©2024 Book Brahma Private Limited.