ಪ್ರೊ.ಎಸ್.ಎಲ್. ಶೇಷಗಿರಿರಾವ್ ಅವರು ಇಂಗ್ಲಿಷ್‌ನಲ್ಲಿ ರಚಿಸಿದ ಮಹಾಕಾವ್ಯ ಮಹಾಭಾರತವನ್ನು ಜಿ.ಎನ್. ರಂಗನಾಥರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಲ್ಕು ಸಂಪುಟಗಳಲ್ಲಿ ಅನುವಾದವಾಗಿರುವ ಶ್ರೀ ಮಹಾಭಾರತ ಕೃತಿಯಲ್ಲಿ ಇದು ಮೂರನೇ ಸಂಪುಟವಾಗಿದೆ.
ಇದರಲ್ಲಿ ಉದ್ಯೋಗ ಪರ್ವ, ಭೀಷ್ಮ ಪರ್ವ, ದ್ರೋಣ ಪರ್ವ, ಕರ್ಣ ಪರ್ವ, ಶಲ್ಯ ಪರ್ವ, ಸೌಪ್ತಿಕ ಪರ್ವ ಹಾಗೂ ಸ್ತ್ರೀ ಪರ್ವ ಒಟ್ಟು ಏಳು ಪರ್ವಗಳಲ್ಲಿ ಕತೆಗಳನ್ನು ರಚಿಸಿದ್ದಾರೆ.
ಉದ್ಯೋಗ ಪರ್ವದಲ್ಲಿ ವಿಶ್ವರೂಪ, ವೃತ್ರ, ಇಂದ್ರ ಮತ್ತು ನಹುಷರ ಕತೆ, ಬೇಡ ಮತ್ತು ಎರಡು ಪಕ್ಷಿಗಳ ಕತೆ, ಬೇಟೆಗಾರನ ಮತ್ತು ಜೇನುತುಪ್ಪದ ಕತೆ, ಕುಬೇರ ಮತ್ತು ಮುಚುಕುಂದರ ಕತೆ, ವಿದುಲ ಮತ್ತು ಅವಳ ಪುತ್ರನ ಕತೆ ಹಾಗೂ ಬೆಕ್ಕು ಮತ್ತು ದಿಂಡಿಕನ ಕತೆ ಇದೆ. ಕರ್ಣ ಪರ್ವದಲ್ಲಿ ಕಾಗೆ ಮತ್ತು ಹಂಸದ ಕತೆ, ಭಲಾಕನ ಕತೆ ಹಾಗೂ ಕೌಶಿಕನ ಕತೆ ಇದೆ. ಸ್ತ್ರೀ ಪರ್ವದಲ್ಲಿ ಅರಣ್ಯದಲ್ಲಿ ದಾರಿ ತಪ್ಪಿದ ಬ್ರಾಹ್ಮಣನ ಕತೆಯನ್ನು ಕೊಟ್ಟಿದ್ದಾರೆ.
©2024 Book Brahma Private Limited.