ಈ ಆಧುನಿಕಕಾಲದಲ್ಲಿ ಪೂರ್ಣವಾಗಿ ವೇದಾಧ್ಯಯನವನ್ನು ಮಾಡುವ ಇಚ್ಛೆಯಿದ್ದರೂ ಅವಕಾಶವಂಚಿತರಾದ ಶ್ರದ್ಧಾವಂತರಿಗಾಗಿ, ಈ ಪುಸ್ತಕದಲ್ಲಿ ಋಗ್ವೇದ ಮತ್ತು ಯಜುರ್ವೇದದ ಸುಮಾರು 134 ಸೂಕ್ತಗಳನ್ನು ಸಂಗ್ರಹಿಸಿ, ಶುದ್ಧವಾಗಿ, ಅಂದವಾಗಿ, ಕನ್ನಡಲಿಪಿಯಲ್ಲಿ ಮುದ್ರಿಸಲಾಗಿದೆ. ಮಂತ್ರಭಾಗಗಳಿಗೆ ಸಾಧಾರವಾಗಿ ಋಷಿ-ದೇವತಾ-ಛಂದಸ್ಸುಗಳನ್ನು ಉಲ್ಲೇಖಿಸಿಲಾಗಿದೆ. ಜೊತೆಗೆ, ಆಧಾರಗ್ರಂಥೋಕ್ತ ಫಲಗಳನ್ನು ಸಂಗ್ರಹರೂಪದಲ್ಲಿ ಕೊಡಲಾಗಿದೆ. ವಿಶೇಷವಾಗಿ, ವಿವಿಧಫಲಗಳನ್ನೀಡುವ ಋಙ್ಮಂತ್ರ ಪ್ರತ್ಯೇಕವಾಗಿ ಸಂಗ್ರಹಿಸಿರುವುದು ಮಂತ್ರಾರ್ಥಸಾಧಕರಿಗೆ ಪ್ರಯೋಜನಕಾರಿಯಾಗಿದೆ.
ಶ್ರೀ ಕೆ. ಜಿ. ಗಣೇಶ ಭಟ್ಟರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಡಿನಲ್ಲಿ ಗ್ರಾಮದವರು. ಕಳೆದ ಮೂರುದಶಕಗಳಿಂದ ಶೃಂಗೇರಿಯಲ್ಲಿ ವಾಸಿಸುತ್ತಿದ್ದಾರೆ. ಶೃಂಗೇರಿಯ ಶ್ರೀಮಠೀಯ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ವೇದ, ಆಗಮ ಮತ್ತು ಸಾಹಿತ್ಯವನ್ನು ಅಭ್ಯಸಿಸಿದ್ದಾರೆ. ಪೌರೋಹಿತ್ಯ ವೃತ್ತಿಯಲ್ಲಿ ಎರಡು ದಶಕಗಳಿಗೂ ಮಿಗಿಲಾದ ಅನುಭವದ ಜೊತೆಗೆ, ನಾಲ್ಕು ಧಾರ್ಮಿಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ), ಪರ್ಜನ್ಯ ಕಲ್ಪಃ, ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ), ಸಂಧ್ಯಾವಂದನಮ್ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ...
READ MORE