’ಮಹಾ ಭಾರತ ಹೇಳಿಯೂ ಹೇಳದ್ದು’ ದೇಶದ ಮಹಾಕಾವ್ಯವಾದ ಮಹಾಭಾರತದ 15 ಕಥೆಗಳನ್ನು ಆಯ್ಕೆಮಾಡಿ, ಆ ಕಥೆಗಳ ಒಳಸುಳಿಯನ್ನು ತೆರೆದಿಡುವ ಪ್ರಯತ್ನ.
ಲೇಖಕ ಜಗದೀಶ ಶರ್ಮರು, ಮಹಾಭಾರತದ ಪ್ರಸಂಗವನ್ನು ಅಪರಾಧ ಮತ್ತು ಶಿಕ್ಷೆಯ ತಳಹದಿಯಲ್ಲಿ ನೋಡುತ್ತಾರೆ. ಮಹಾಭಾರತದಲ್ಲಾದ ಅರೆಕ್ಷಣದ ತಪ್ಪು, ಒಂದು ಅನವಶ್ಯಕ ಛಲ, ಆಕ್ಷಣದ ನಿರರ್ಥಕ ನಿರ್ಧಾರ, ಸೇಡಿನ ಕಿಚ್ಚು…ಹೀಗೆ ಕಾಲದ ಸುರುಳಿಯಲ್ಲಿ ಚಕ್ರತೀರ್ಥದಂತೆ ಸುತ್ತುತ್ತಾ ಸುತ್ತುತ್ತಾ ಅದಕ್ಕೆ ಕಾರಣನಾದ ವ್ಯಕ್ತಿಯನ್ನೇ ಬಲಿತೆಗೆದುಕೊಳ್ಳುತ್ತದೆ ಎಂಬುದನ್ನು, ವ್ಯಾಖ್ಯಾನಗಳ ಮೂಲಕ ಓದುಗರ ಮುಂದಿಟ್ಟಿದ್ದಾರೆ.
ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...
READ MORE