‘ಜ್ಞಾನಸಿಂಧು’ ಮಲ್ಲೇಪುರಂ ಜಿ. ವೆಂಕಟೇಶ ಅವತರ ಸಂಪಾದಿತ ಕೃತಿಯಾಗಿದೆ. ಈ ಕೃತಿಯು ಚಿದಾನಂದಾವಧೂತರ ವೇದಾಂತ ಕಾವ್ಯವಾಗಿದೆ. ಕನ್ನಡ ಸಾಹಿತ್ಯ ಪರಂಪರೆ ನಮ್ಮ ಮುಂದೆ ಸಮೃದ್ಧವಾಗಿ ಕಾಣುತ್ತಿದೆ ಎಂದರೆ, ಅದಕ್ಕೆ ಕಾರಣರಾದವರು ಕಳೆದ ಶತಮಾನದಲ್ಲಿ ಕನ್ನಡ ಕಂಡ ಪಂಡಿತ ಪಡೆ, ಹಳೆ ಕಾವ್ಯಗಳನ್ನು ಪತ್ತೆ ಮಾಡಿ ಪರಿಷ್ಕರಿಸಿ ಅದರ ಮಹತ್ವವನ್ನು ವಿವರಿಸಿ ಜನ ಸಾಮಾನ್ಯರಿಗೆ ದಕ್ಕುವಂತೆ ಮಾಡಿದ ಹೆಗ್ಗಳಿಕೆ ಇವರದು. ಇನ್ನು ಭಾಮಿನಿ ಷಟ್ಪದಿಯಲ್ಲಿರುವ ‘ಜ್ಞಾನಸಿಂಧು’ ನಿಜಕ್ಕೂ ಜ್ಞಾನದ ಸಿಂಧೂವೇ ಸರಿ. ಪೀಠಿಕಾ ಪ್ರಕರಣವೂ ಸೇರಿದಂತೆ ಒಟ್ಟು ನಲವತ್ತೊಂಬತ್ತು ಪ್ರಕರಣಗಳಿದ್ದು ಒಟ್ಟು ಪದ್ಯಗಳ ಸಂಖ್ಯೆ ಮೂರುಸಾವಿರ ಆರುನೂರು. ಅದ್ವೈತಕ್ಕೆ ಸಂಬಂಧಿಸಿದ ಯಾವ ವಿಷಯವೂ ಬಿಟ್ಟು ಹೋಗದಂತೆ ಚಿದಾನಂದಾವಧೂತರು ತೋರಿಸಿರುವ ಕಾಳಜಿ ಗಮನಾರ್ಹವಾಗಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...
READ MORE