‘51 ಅಕ್ಷರ ಶಕ್ತಿ ಪೀಠಗಳು ಲಲಿತಾ ಶೇಷಾದ್ರಿ’ ಅವರ ಕೃತಿಯಾಗಿದೆ. ಆ ಸೇತು ಹಿಮಾಚಲ ಪರ್ಯಂತ ಇರುವ ಭಕ್ತರಿಗೆ ಈ ಕಾಲಟಿಯು ಯಾತ್ರಾಕ್ಷೇತ್ರವಾಗಿ ಪ್ರಕಾಶಿಸುತ್ತಿದೆ. ಅದಕ್ಕೆ ಮೂಲ ಕಾರಣರಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಮಹಾ ಸ್ವಾಮಿಗಳನ್ನೂ, ಸ್ವಾಮಿಗಳ ಅಪೇಕ್ಷೆಯನ್ನು ಪೂರೈಸಿದ ದಿವಾನ್ ಶೇಷಾದ್ರಿ ಐಯ್ಯರ್ ಅವರನ್ನೂ ಸ್ಮರಿಸುತ್ತಾ ಕಾಲಟಿ ಕ್ಷೇತ್ರದಲ್ಲಿ ಪ್ರಕಾಶಿಸುತ್ತಿರುವ ಜಗದ್ಗುರು ಶ್ರೀ ಶಂಕರಾಚಾರ್ಯರನ್ನೂ, ಜಗನ್ಮಾತೆ ಶ್ರೀ ಶಾರದಾ ಪರಮೇಶ್ವರಿಯನ್ನೂ ವಂದಿಸಿ ಜನ್ಮ ಸಾಫಲ್ಯ ಪಡೆಯೋಣ. ದಿವಾನ್ ಶೇಷಾದ್ರಿ ಐಯ್ಯರ್‌ರವರ ಸ್ವಗೃಹವಾದ ಕುಮಾರ ಕೃಪ. ಈ ಗೃಹಕ್ಕೆ ವಿಶೇಷ ಅತಿಥಿಯಾಗಿ ಬಂದವರಲ್ಲಿ ಅಗ್ರಗಣ್ಯರು ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿಯವರ ಪಾದಸ್ಪರ್ಶವಾದ ಸ್ಥಳ, ಶ್ರೀಗುರುಗಳು ಈ ಗೃಹದಲ್ಲಿದ್ದು ಅವರ ನಿತ್ಯಕರ್ಮಗಳನ್ನು ಅನುಷ್ಠಾನಗಳನ್ನು, ನಡೆಸಿದ್ದಾರೆ.
ಲಲಿತಾ ಶೇಷಾದ್ರಿ ಅವರು ಬೆಂಗಳೂರು ಉತ್ತರ ಲಯನ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿದ್ದು ಈ ಸಂಸ್ಥೆಯ ಮೂಲಕ ಹಲವಾರು ದಶಕಗಳಿಂದ ಸಮಾಜಸೇವೆಯನ್ನು ಮಾಡಿದ್ದಾರೆ. ಅವರು ಸ್ವತಃ ಲೇಖಕಿಯಾಗಿದ್ದು ಹಲವಾರು ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಹಾಗೆಯೇ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಕಳೆದ 25 ವರ್ಷಗಳಿಂದ 'ಸೌಹಾರ್ದ ಕುಟುಂಬ ಸಲಹಾ ಕೇಂದ್ರದ ಸ್ಥಾಪಿತ ಅಧ್ಯಕ್ಷೆಯಾಗಿ ಮಹಿಳೆಯರ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಿರುತ್ತಾರೆ. ಹಲವಾರು ವರ್ಷಗಳಿಂದ ಅಂಗ ಕಾರುಣ್ಯ ಕೇಂದ್ರದ ಸದಸ್ಯೆಯಾಗಿ ಸುಮಾರು 10 ಸಾವಿರ ಜನಕ್ಕೆ ಕೃತಕ ಕಾಲು ಜೋಡಣೆಯಲ್ಲಿ ಸಹಾಯ ಮಾಡಿದ್ದಾರೆ. ಕೃತಿಗಳು: ಅಷ್ಡದಶಾ ಪೀಠಗಳು ...
READ MORE