ಪರ್ಜನ್ಯ ಕಲ್ಪಃ -ಈ ಕೃತಿಯನ್ನು ಕೆ.ಜಿ. ಗಣೇಶ ಭಟ್ ಅವರು ರಚಿಸಿದ್ದಾರೆ. ನಮ್ಮ ಪ್ರಾಚೀನ ಋಷಿಗಳು ಹವಾಮಾನ ವೈಪರೀತ್ಯದಿಂದುಂಟಾಗುವ ಭೀಕರ ಕ್ಷಾಮ ಕ್ಷೋಭೆಗಳಿಗೆ ಪರ್ಜನ್ಯ ಜಪ – ಹೋಮಾದಿಗಳ ಮೂಲಕ ನಿವಾರಣೋಪಾಯವನ್ನು ಕಂಡುಕೊಂಡಿದ್ದರು. ಈ ಪುಸ್ತಕವು ಇಂತಹ ವೇದೋಕ್ತ ಪರ್ಜನ್ಯ ಜಪ – ಹೋಮಾದಿಗಳ ಕುರಿತಾದ ಅಪರೂಪದ ಸಂಗ್ರಹಯೋಗ್ಯ ಗ್ರಂಥ. ಈ ಪುಸ್ತಕದಲ್ಲಿ ಸುವೃಷ್ಟಿಗಾಗಿ ಕೈಗೊಳ್ಳುವ ಶೌನಕೀಯ ಪರ್ಜನ್ಯ ಶಾಂತಿ, ಋಗ್ವಿಧಾನೀಯ ಪರ್ಜನ್ಯ ಶಾಂತಿ, ಬೋಧಾಯನೀಯ ಪರ್ಜನ್ಯ ಶಾಂತಿ, ವೈಭಾಯನೀಯ ಪರ್ಜನ್ಯ ಶಾಂತಿಗಳ ಜೊತೆಗೆ ಒಂಭತ್ತು ವಿಧದ ಪರ್ಜನ್ಯ ಜಪ – ಹೋಮದ ಕುರಿತಾಗಿ ಸಮಗ್ರ ಮಾಹಿತಿ ಇದೆ. ಇದು ಪ್ರಯೋಕ್ತೃಗಳಿಗೆ ಪ್ರಯೋಜನಕಾರಿಯಾಗಿದೆ.
ಶ್ರೀ ಕೆ. ಜಿ. ಗಣೇಶ ಭಟ್ಟರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಡಿನಲ್ಲಿ ಗ್ರಾಮದವರು. ಕಳೆದ ಮೂರುದಶಕಗಳಿಂದ ಶೃಂಗೇರಿಯಲ್ಲಿ ವಾಸಿಸುತ್ತಿದ್ದಾರೆ. ಶೃಂಗೇರಿಯ ಶ್ರೀಮಠೀಯ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ವೇದ, ಆಗಮ ಮತ್ತು ಸಾಹಿತ್ಯವನ್ನು ಅಭ್ಯಸಿಸಿದ್ದಾರೆ. ಪೌರೋಹಿತ್ಯ ವೃತ್ತಿಯಲ್ಲಿ ಎರಡು ದಶಕಗಳಿಗೂ ಮಿಗಿಲಾದ ಅನುಭವದ ಜೊತೆಗೆ, ನಾಲ್ಕು ಧಾರ್ಮಿಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ), ಪರ್ಜನ್ಯ ಕಲ್ಪಃ, ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ), ಸಂಧ್ಯಾವಂದನಮ್ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ...
READ MORE