ಭಕ್ತಿಸೂತ್ರಗಳು-ಲೇಖಕ ರಂಗನಾಥ ದಿವಾಕರ ಅವರ ಕೃತಿ. ನಾರದೀಯ ಭಕ್ತಿಸೂತ್ರಗಳು ಹಾಗೂ ಶಾಂಡಿಲ್ಯ ಭಕ್ತಿ ಸೂತ್ರಗಳು; ಭಕ್ತಿ ಮಾರ್ಗದ ಅಭ್ಯಾಸದ ದೃಷ್ಟಿಯಿಂದ ಇವು ಅವಶ್ಯವಾಗಿವೆ. ನಾರದೀಯ ಭಕ್ತಿಸೂತ್ರಗಳು-84 ಹಾಗೂ ಶಾಂಡಿಲ್ಯ ಭಕ್ತಿ ಸೂತ್ರಗಳು -100 ಹೀಗೆ ಒಟ್ಟು 184 ಸೂತ್ರಗಳು ಈ ಕೃತಿಯಲ್ಲಿ ಕೊಡಲಾಗಿದೆ. ನಾರದೀಯ ಸೂತ್ರಗಳು ಸ್ವಲ್ಪ ಸರಳ ಹಾಗೂ ಶಾಂಡಿಲ್ಯ ಸೂತ್ರಗಳು ಸ್ವಲ್ಪ ಕ್ಲಿಷ್ಟ. ಈ ಭಕ್ತಿ ಸೂತ್ರಗಳಲ್ಲಿ ಭಕ್ತಿಯ ವರ್ಣನೆ ಹಾಗೂ ತಾತ್ವಿಕ- ತತ್ವ ವಿವೇಚನೆಯೂ ಇದೆ. ಜೀವ-ಜಗತ್-ಈಶ್ವರ ಮುಂತಾದವುಗಳ ಸಂಬಂಧವೂ ಈ ಸೂತ್ರಗಳಲ್ಲಿ ಅಡಗಿದೆ.
ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು. 1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...
READ MORE