ಮುಡಿಪು ಸುಬ್ರಹ್ಮಣ್ಯ ಭಟ್ ಅವರು ಬರೆದಿರುವ ಕಿರು ಹೊತ್ತಿಗೆ ಸುಲಗ್ನಾಃ ಸಾವಧಾನಾಃ. ವಿವಾಹ ಸಂಸ್ಕಾರದ ಕಿರು ಪರಿಚಯವನ್ನು ಈ ಹೊತ್ತಿಗೆ ಮಾಡಿಕೊಡುವಂತಿದ್ದು, ಯಜುರ್ವೇದ ಮತ್ತು ಬೋದಾಯನ ಪ್ರಯೋಗದ ಬೆಳಕಿನಲ್ಲಿ ಸೃಷ್ಟಿಯಾಗಿದೆ. ವಿವಾಹದ ಅಂತರಾಋðವನ್ನು ಇದಿನ ಯುವ ತಲೆಮಾರಿಗೆ ಈ ಹೊತ್ತಿಗೆ ಸಾರುವಂತಿದೆ.
ಪುರೋಹಿತ ಮನೆತನದವರಾದ ಮುಡಿಪು ಸುಬ್ರಹ್ಮಣ್ಯ ಭಟ್ ಅವರು, ಶೃಂಗೇರಿ ಜಗದ್ಗುರು ಮಠೀಯ ಸದ್ವಿದ್ವಾಸಂಜೀವಿನೀ ಪಾಠಶಾಲೆಯಲ್ಲಿ ಸಾಹಿತ್ಯವನ್ನೂ, ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದವರು. ಗುಬ್ಬಿಯ ಚಿದಂಬರಾಶ್ರಮ ಪ್ರೌಢಶಾಲೆ, ಬೀರೂರಿನ ಸರ್ಕಾರಿ ಪ್ರೌಢಶಾಲೆ ಹಾಗೂ ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಂಸ್ಕೃತವನ್ನು ಬೋಧಿಸಿ, ನಿವೃತ್ತಿಯ ಬಳಿಕ ಬರವಣಿಯಲ್ಲಿ ತೊಡಗಿಸಿಕೊಂಡವರು. ಕೃತಿ: ಸುಲಗ್ನಾಃ ಸಾವಧಾನಾಃ , ಉಪನಯನ ...
READ MORE