‘ಕೌಶಿಕ ರಾಮಾಯಣ’ ಕೃತಿಯು ಬಿ.ಎಚ್. ಶ್ರೀಧರ ಅವರ ರಾಮಾಯಣ ವಿಚಾರಗಳನ್ನೊಳಗೊಂಡ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸದ್ಗುರುವನ್ನು ಬ್ರಹ್ಮಸ್ವರೂಪನೆಂದು ನಂಬಿದ ಭಾರತದ ಅಂಗವಾದ ಕನ್ನಡ ನಾಡಿನ ಉತ್ತರ ಕನ್ನಡ ಜಿಲ್ಲೆಯ ಕುಮಟೆ-ಶಿರಸಿ ತಾಲೂಕುಗಳ ಗಡಿಗಳು ಸಂಧಿಸುವಲ್ಲಿರುವ ಯಾಣದ ವರಕವಿ ಬತ್ತಲೇಶ್ವರ ತನಗೆ ಹೆಚ್ಚುಕಡಿಮೆ ಸಮಕಾಲೀನನಾಗಿದ್ದ ಕುಮಾರವ್ಯಾಸನು “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂತಿನಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ” ಎಂದು ಹೇಳಲು ಕಾರಣನಾದದ್ದು "ಕೌಶಿಕ ರಾಮಾಯಣ”ವನ್ನು ಬರೆದುದರಿಂದ. ಇದು ಭಾಮಿನೀ ಷಟ್ಪದಿಯಲ್ಲಿ “ಲಲಿತವಹ ಕನ್ನಡದ ನುಡಿಯಲಿ” ಬರೆಯಲಾದ 44 ಸಂಧಿಗಳನ್ನುಳ್ಳ ಮಹಾಕಾವ್ಯ. ಯುದ್ಧ ಕಾಲದಲ್ಲಿ ಬಾಣ ಬಿಡುವಾಗ ರಾಮ ಅನೇಕ ಸಲ ಗುರು ಕೌಶಿಕನನ್ನು ಇಲ್ಲಿ ನೆನೆದುಕೊಳ್ಳುತ್ತಾನೆ. ಅವನ ಜಯದ ಮೂಲ ಕೌಶಿಕ ಕೃಪೆ. ಆದುದರಿಂದ ಇದು ಕೇವಲ ರಾಮಾಯಣವಲ್ಲ, ಕೌಶಿಕ ರಾಮಾಯಣ! ಎನ್ನುತ್ತದೆ ಈ ಕೃತಿ.
©2024 Book Brahma Private Limited.