`ಭಗವದ್ಗೀತೆ - ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ’ ಜಗದೀಶ ಶರ್ಮಾ ಅವರ ರಚನೆಯ ಕೃತಿಯಾಗಿದೆ. ಬದುಕಿನ ಲೆಕ್ಕಗಳನ್ನು ಪರಿಹರಿಸಲು ನಮ್ಮ ಹತ್ತಿರ ಕ್ಯಾಲ್ಕ್ಯುಲೇಟರ್ ಇಲ್ಲ. ಸರಳ ಸಮೀಕರಣಗಳಿಗೆ ನಮ್ಮ ಅನುಭವದಿಂದ ಉತ್ತರ ಕಂಡುಹಿಡಿಯಬಹುದು. ಆದರೆ ಸಂಕೀರ್ಣ ಗಣಿತಕ್ಕೆ ಲಾಗರಿದಮ್ ಟೇಬಲ್ ಬೇಕು. ನಮ್ಮಲ್ಲಿರುವ ದ್ವಂದ್ವ, ಸಂದೇಹ, ಅನುಮಾನಗಳನ್ನು ಪರ್ಯಾಲೋಚಿಸಿ ಪರಿಹರಿಸಿಕೊಳ್ಳಲು ಜಗದೀಶ ಶರ್ಮಾ ಸಂಪ ಅವರ “ಭಗವದ್ಗೀತೆ - ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ” ಕೃತಿ ಸಹಾಯಕವಾಗಿದೆ. ಪೀಠಿಕೆಯಲ್ಲಿ ಲೇಖಕರು “ಒಬ್ಬೊಬ್ಬರ ನೋವು ಬೇರೆ. ಒಂದೊಂದು ಊರಿನ ನೋವು ಬೇರೆ. ಒಂದೊಂದು ಕಾಲದ ನೋವು ಬೇರೆ. ಎಷ್ಟು ಜೀವಿಯೋ, ಅವುಗಳಲ್ಲಿ ಅದೆಷ್ಟು ಭಾವವೋ, ಜಗತ್ತಿನಲ್ಲಿ ಅಷ್ಟು ನೋವುಗಳು” ಎಂದು ಹೇಳುತ್ತಾ ಈ ಕೃತಿಯ ವಿಸ್ತಾರವನ್ನು ಪರಿಚಯಿಸಿದ್ದಾರೆ.
©2024 Book Brahma Private Limited.