ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು ರಚಿಸಿದ ಕೃತಿ-ಚುಂಚೂರು ಮಹಾಪುರತಾಯಿ ಚರಿತ್ರೆ. ದೇವರ ಉಗಮ ಮತ್ತು ವಿಕಾಸ, ಎಲ್ಲಮ್ಮ ಸಂಪ್ರದಾಯದ ದೇವತೆಗಳು, ಚುಂಚೂರು ಗ್ರಾಮದ ಇತಿಹಾಸ, ಬೆತ್ತಲೆಸೇವೆ ಮತ್ತು ಆರಾಧನೆಗಳು, ನಂಬಿಕೆ ಮತ್ತು ಸಂಪ್ರದಾಯಗಳು,ಸಾಹಿತ್ಯ ಮತ್ತು ಕಲೆ, ಸಂಸ್ಕೃತಿ ಮತ್ತು ವಿಕೃತಿ, ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಗ್ರಾಮೀಣ ದೇವಾಲಯ ಮತ್ತು ಇತಿಹಾಸವನ್ನು ಈ ಕೃತಿ ಕಟ್ಟಿಕೊಡುತ್ತದೆ.
ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವೀಧರರು. ಹಿರಿಯ ಶ್ರೇಣಿ ಉಪನ್ಯಾಸಕರಾಗಿ ನಿವೃತ್ತರು. ಬೆಂಗಳೂರು ಹಾಗೂ ಕಲಬುರಗಿ ದೂರದರ್ಶನದಲ್ಲಿ ಬೆಳಗು ಹಾಗೂ ಸಾಹಿತ್ಯ ಸಂಪದ ಕಾರ್ಯಕ್ರಮಗಳಲ್ಲಿ ಇವರ ವಿಚಾರಗಳು ಪ್ರಸಾರವಾಗಿವೆ. ವಿವಿಧ ವಿಚಾರ ಸಂಕಿರಣ, ಶಿಬಿರ, ಸಮ್ಮೇಳನಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ. ತಂದೆ ಭೀಮಶಾ ದೊಡ್ಡಮನಿ. ಕೃತಿಗಳು: ನೊಂದವರ ಹಾಡು, ನಮ್ಮ ದೇಶ ನಮ್ಮ ಜನ, ಆಕ್ರೋಶ, ಮರೆಯದ ಮಾಣಿಕ್ಯ, ಪಂಚಾಯತಿ, ಹಚ್ಚಡದ ಪದರಾಗ, ಸೊಲ್ಲೆತ್ತಿ ಹಾಡೇನ, ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ,(ಕವನ ಸಂಕಲನಗಳು), ಬೆಳ್ಳಕ್ಕಿ ಮೂಡ್ಯಾವ, ಶಾರಿ ಶ್ಯಾಣಾ ಆದಾಗ (ಕಥಾ ಸಂಕಲನ), ದೇವಿಕಾರ್ಯ, ಏಡ್ಸ್ ...
READ MORE