ಶಬ್ದಾತೀತ ವಿವೇಕ-ಕೃತಿಯನ್ನು ಸ್ವಾಮಿ ಸುಖಬೋಧಾನಂದರು ಬರೆದಿದ್ದು, ಈ ಜಗತ್ತು ನಾದಮಯವಾಗಿದೆ. ಆದರೂ, ಮೌನದಂತಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಶಬ್ದಕ್ಕೂ ನಿಲುಕದ ಶಬ್ದವೊಂದಿದೆ. ಅದುವೇ ಪರಬ್ರಹ್ಮ. ಇದನ್ನು ಅರ್ಥ ಮಾಡಿಕೊಳ್ಳುವುದು ವಿವೇಕ. ಈ ವಿವೇಕ ಜಾಗೃತಿಯಾದರೆ ಜೀವನವೂ ಸಂಭ್ರಮ, ಮರಣವೂ ಸಂಭ್ರಮ. ಜೀವನದ ಪ್ರತಿ ಗಳಿಗೆಯನ್ನು ಇಂಥಹ ವ್ಯಕ್ತಿ ಸುಖವನ್ನು ಅನುಭವಿಸಬಲ್ಲ. ಇಂತಹ ಅಂಶಗಳಿರುವ ಶ್ರೇಷ್ಠ ಅಂಶಗಳಿರುವ ಕೃತಿ.
ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...
READ MORE