‘81 ಶಿವಕ್ಷೇತ್ರ ಹಾಗೂ ನವಗ್ರಹ ಪರಿಹಾರ ಕ್ಷೇತ್ರಗಳು’ ಲಲಿತಾ ಶೇಷಾದ್ರಿ ಅವರ ಕೃತಿಯಾಗಿದೆ. ಒಬ್ಬನೇ ಭಗವಂತನು ಭಕ್ತರನ್ನು ಅನುಗ್ರಹಿಸುವ ಸಲುವಾಗಿ ಅನೇಕ ರೂಪಗಳನ್ನು ಧರಿಸಿದ್ದಾನೆ. ಅನೇಕ ರೀತಿಯಲ್ಲಿ ಭಕ್ತರನ್ನು ಅನುಗ್ರಹಿಸಿ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಾನೆ. ಹಾಗಾಗಿಯೇ ಕಾಶಿಯಲ್ಲಿ ಶ್ರೀವಿಶ್ವೇಶ್ವರನನ್ನು ದರ್ಶಿಸಿದರೂ ರಾಮೇಶ್ವರದಲ್ಲಿ ರಾಮೇಶ್ವರನನ್ನು ದರ್ಶಿಸಿದರೂ ಒಬ್ಬನೇ ಭಗವಂತ ಅಲ್ಲಿ ವಿರಾಜಮಾನನಾಗಿದ್ದಾನೆ ಎಂಬ ಭಾವನೆಯು ನಮ್ಮ ಸನಾತನ ಧರ್ಮಾವಲಂಬಿಗಳಿಗೆ ಬರುತ್ತದೆ. ಇದು ನಮ್ಮ ಸನಾತನ ಧರ್ಮದ ವೈಶಿಷ್ಟ್ಯವಾಗಿದೆ. ನಮ್ಮ ದೇಶದಲ್ಲಿ ಅನೇಕ ಕ್ಷೇತ್ರಗಳಿದ್ದು ಅವುಗಳಲ್ಲಿ ಪ್ರಸಿದ್ಧವಾದ ಕೆಲವು ಕ್ಷೇತ್ರಗಳ ಪರಿಚಯವನ್ನು ಜನಸಾಮಾನ್ಯರಿಗೆ ಮಾಡಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಲಲಿತಾ ಶೇಷಾದ್ರಿ ಅವರು '81 ಶಿವ ಕ್ಷೇತ್ರಗಳು ಹಾಗೂ ನವಗ್ರಹ ದೋಷ ಪರಿಹಾರ ಕ್ಷೇತ್ರಗಳು ಎಂಬ ಗ್ರಂಥವೊಂದನ್ನು ರಚಿಸಿದ್ದಾರೆ. ಈ ಗ್ರಂಥವನ್ನವಲೋಕಿಸಿ ಜಗದ್ಗುರು ಮಹಾಸ್ವಾಮಿಗಳವರು ಸಂತೋಷಗೊಂಡಿದ್ದಾರೆ.
©2024 Book Brahma Private Limited.