‘ವೈಷ್ಣವ ಸಂತರು’ ಶ್ರೀಚೈತನ್ಯ ಮಹಾಪ್ರಭುಗಳ ಭಕ್ತಪರಂಪರೆ ಕುರಿತು ಬರೆದ ಶ್ರೀಧರ ಬನವಾಸಿ ಅವರ ಕೃತಿ. ಚಿಂತಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮುನ್ನುಡಿ ಬರೆದಿದ್ದಾರೆ. ಬಂಗಾಲದ ಮಹಾಸಂತರ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ. ‘ಶ್ರೀಧರ ಬನವಾಸಿ ಅವರು ಉತ್ತಮ ಲೇಖಕರು. ಅವರು ಕತೆ, ಕವಿತೆಗಳ ಮೂಲಕ ಸೃಜನಶೀಲ ನೆಲೆಯಲ್ಲಿ ಪ್ರಸಿದ್ಧರಾಗಿದ್ದಾರೆ. ಇದೀಗ ಭಕ್ತಿಪರಂಪರೆಯ ವೈಷ್ಣವ ಸಂತರನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಮಹತ್ತರ ಕಾರ್ಯದಲ್ಲಿ ನಿಮಗ್ನರಾಗಿದ್ದಾರೆ. ಆ ಶ್ರಮದ ಫಲರೂಪವೇ `ವೈಷ್ಣವ ಸಂತರು’ ಎಂಬ ಉತ್ತಮ ಕೃತಿ.
ಇದು ಹದಿನೆಂಟು ಜನ ಸಂತರ ಜೀವನ-ಸಾಧನೆಗಳನ್ನು ಪರಿಚಯಿಸುತ್ತದೆ. ಶ್ರೀಚೈತನ್ಯ ಮಹಾಪ್ರಭುಗಳಿಂದ ಈ ಕೃತಿ ಪ್ರಾರಂಭಗೊಂಡು ಶ್ರೀಲ ಪ್ರಭುಪಾದರ ಪರಿಚಯದೊಂದಿಗೆ ಮುಗಿಯುತ್ತದೆ. ಒಬ್ಬೊಬ್ಬ ಸಂತರ ಸಂಕ್ಷಿಪ್ತ ಜೀವನ ವಿವರಗಳನ್ನು ಕಟ್ಟಿಕೊಡುವ ಚಿತ್ರಣವು ವಿಶಿಷ್ಟವಾಗಿ ಮೂಡಿ ಬಂದಿದೆ’. ಎನ್ನುತ್ತಾರೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್.
ಶ್ರೀಧರ ಬನವಾಸಿ ಒಬ್ಬ ಉತ್ತಮ ಕಥನಕಾರರಾಗಿದ್ದು, ಅವರ ಪರಿಣಿತ ಪ್ರಜ್ಞೆ ಸೃಜನಶೀಲತೆಯ ಆವರಣದಲ್ಲಿ ಕೈಗೂಡಿದೆ. ಈ ಕಾರಣದಿಂದ ಅಪೂರ್ವಘಟನೆ, ಪ್ರಸಂಗಗಳನ್ನು ತೆಗೆದುಕೊಂಡು ಪ್ರಸ್ತುತ ಕೃತಿಯನ್ನು ಅಮೋಘವೆಂಬಂತೆ ರಚಿಸಿದ್ದಾರೆ.
©2025 Book Brahma Private Limited.