ಇದು ಎಂ. ಸಿ. ಡೋಂಗ್ರೆ ಅವರ ಒಂದು ವಿಮರ್ಶ ಕೃತಿ. ಕೃತಿಯನ್ನು ಬರೆದ ಉದ್ದೇಶವನ್ನು ಹೇಳುವ ಲೇಖಕರು 'ಭಗವದ್ಗೀತೆಯನ್ನು ಹೀಯಾಳಿಸುವುದಕ್ಕಾಗಲಿ ಅಥವಾ ಯಾವುದೇ ವ್ಯಕ್ತಿಯ ನಂಬಿಕೆಗಳನ್ನು ಕಾರಣವಿಲ್ಲದೆ ಅಲುಗಾಡಿಸುವುದಕ್ಕಾಗಲಿ ಈ ಪುಸ್ತಕವನ್ನು ಬರೆದಿಲ್ಲ'' ಎಂದು ಆರಂಭದಲ್ಲೇ ಸ್ಪಷ್ಟಿಕರಣ ನೀಡುತ್ತಾರೆ. ಲೇಖಕರು ಭಗವದ್ಗೀತೆಯನ್ನು ಓದಿ, ಆಳವಾಗಿ ಅಧ್ಯಯನ ಮಾಡಿದ ಬಳಿಕ ಈ ವಿಮರ್ಶೆಯನ್ನು ಮಾಡಿದ್ದು, ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಮೊದಲ ಭಾಗದಲ್ಲಿ ಭಗವದ್ಗೀತೆಯ ಕಾಲ ನಿರ್ಣಯವನ್ನು ಮಾಡುತ್ತಾರೆ. ಗೀತೆಯನ್ನು ಯಾವಾಗ ರಚಿಸಲಾಯಿತು, ಭಗವದ್ಗೀತೆಗೆ ಶಂಕರಾಚಾರ್ಯರ ಕೊಡುಗೆ ಮತ್ತು ಆಚಾರ್ಯರ ಕೃತಿಗಳು ಅವರ ವ್ಯಕ್ತಿತ್ವ ಭಗವದ್ಗೀತೆಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.