ಈ ಕಿರು ಕೃತಿಯು ಜೈನಧರ್ಮದ ಪ್ರಾಚೀನತೆ ಅದರ ತತ್ತ್ವ ಹಾಗೂ ಜೈನ ಬಸದಿಗಳ ಐತಿಹಾಸಿಕವಾಗಿ ಸಮಗ್ರ ಮಾಹಿತಿಯನ್ನು ಕೃತಿಯು ಒಳಗೊಂಡಿದೆ. ಈ ಕೃತಿಯ ಮೊದಲ ಮುದ್ರಣವು 1999 ರಲ್ಲಿ ಕಂಡಿತ್ತು.
ಎಸ್.ಡಿ. ಶೆಟ್ಟಿ ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹಳದೀಪುರದವರು. ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಮಂಜೂಷಾ ವಸ್ತು ಸಂಗ್ರಹಾಲಯ ಮತ್ತು ಉಜಿರೆಯ ಹಾಮಾನಾ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿರುವ ಅವರು ಗ್ರಂಥ ಸಂಪಾದನೆ, ಶಾಸನ ಅಧ್ಯಯನ, ಸಂಶೋಧನೆ ಹಾಗೂ ವಿಮರ್ಶಾ ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದಾರೆ. ...
READ MORE