ಲೇಖಕ ಕೋಟ ವಾಸುದೇವ ಕಾರಂತ ಅವರು ಹೇಳುವಂತೆ ’ಹಿಂದೆ ಎಂದೆಂದೂ ದೇವರನ್ನು ನಂಬುತ್ತಿದ್ದ ನಮ್ಮ ದೇಶವು, ಸ್ವರಾಜ್ಯ ಬಂದನಂತರ ಸೆಕ್ಯೂಲರ್ ಕ್ರಮದ್ದಾಯಿತು. ದೇವರ ಭಯ, ಪಾಪದ ಭೀತಿ ನಾಶವಾಗುತ್ತಾ ಬಂತು. ಹೀಗಾಗಬಾರದು. ಇದು ಅರ್ಧ ಕತೆ, ಮರಣದ ಆಚೆಗಿನ ಬಾಳನ್ಗೂ ಶಾಸ್ತ್ರದ ಮೂಲಕ ಅರಿತಿರಬೇಕು. ಪಾಪದ ಭೀತಿ ಅತ್ಯಗತ್ಯ ತಮ್ಮ ಮಕ್ಕಳಿಗೆ ಧರ್ಮದ ದಾರಿ ಹಿಡಿಸಬೇಕೆಂದಿರುವ ತಂದೆ-ತಾಯಿಗಳಿಗೆ ಈ ಕೃತಿ ಪ್ರಯೋಜನವಾಗದಿರದು ಎಂದು ಕೃತಿಯ ಮಹತ್ವವನ್ನು ತಿಳಿಸಿದ್ದಾರೆ. ಈ ಕೃತಿಯ ಮೊದಲ ಮುದ್ರಣವು 1981 ರಲ್ಲಿ ಆಗಿತ್ತು. 2010ರ ಮುದ್ರಣವು 5ನೇ ಆವೃತ್ತಿಯದ್ದಾಗಿದೆ.
ಕೋಟ ವಾಸುದೇವ ಕಾರಂತ ಮೂಲತಃ ಮಣಿಪಾಲದವರು, ಜಾತಿ ಧರ್ಮದ ಮಹತ್ವ, ದೇಶದ ಉದ್ಧಾರಕ್ಕೆ ಏಕಮಾತ್ರ ದಾರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕಾನ್ ಕ್ವೆಸ್ಟ್ ಆಫ್ ಬಾಡಿ’ ಇವರ ಆಂಗ್ಲ ಕೃತಿಯಾಗಿದೆ. ಮದರಾಸು ಸರಕಾರದಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರು.ಇವರ ವಿದ್ಯಾಭ್ಯಾಸ ಎಂ..ಎ.; ಎಫ್ ಐಇ. ...
READ MORE