‘ಆದಿಪುರಾಣ ದೀಪಿಕೆ ’ ಕೃತಿಯು ತ.ಸು ಶಾಮರಾಯ ಹಾಗೂ ಪ. ನಾಗರಾಜಯ್ಯ ಅವರ ಸಂಪಾದಿತ ಕೃತಿ. ಶ್ರವಣ ಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಬರೆದ ನುಡಿತೋರಣದಲ್ಲಿ ‘ಆದಿಪುರಾಣ 16 ಆಶ್ವಾಸಗಳ ಕಾವ್ಯ. 1630 ವಿವಿಧ ಪದ್ಯಗಳುಳ್ಳ ಹಾಗೂ ಹಲವು ಗದ್ಯಭಾಗಗುಳ್ಳ ಚಂಪೂ ಕಾವ್ಯ. ಕವಿ ಇದನ್ನು ಕೇವಲ ಮೂರು ತಿಂಗಳಿನಲ್ಲಿ ಬರೆದು ಮುಗಿಸಿದೆ ಎಂದಿದ್ದಾನೆ. ಕ್ರಿ.ಶ 941 ರಲ್ಲಿ ಈ ಕಾವ್ಯ ಪೂರ್ಣಗೊಂಡಿತು. ಇದರಲ್ಲಿ ಭಗವಾನ್ ಜಿನಸೇನಾಚಾರ್ಯರು ಪೂರ್ವಪುರಾಣದಲ್ಲಿ ಪುರಾಣ ಮಾರ್ಗದಲ್ಲಿ ಬಿತ್ತರಿಸಿದ ಆದಿತೀರ್ಥಂಕರ ವೃಷಭನಾಥರ ಹಾಗೂ ಆವರ ಮಕ್ಕಳಾದ ಭರತ -ಬಾಹುಬಲಿಯರ ಕಥೆಯನ್ನು ಪಂಪ ಕಾವ್ಯಮಾರ್ಗದಲ್ಲಿ ನಿರೂಪಿಸಿದ್ದಾನೆ. ಕಾವ್ಯದ ಉತ್ಕೃಷ್ಟತೆ. ಜಿನಧರ್ಮ ಶ್ರದ್ಧೆ, ವಾಗ್ ವೈಭವ -ಇವು ಮೂರೂ ಮೇಳೈಸಿದ ಸತ್ವಯುತ ಕಾವ್ಯ ಆದಿಪುರಾಣ, ಪಂಪನ ಈ ಕಾವ್ಯ , ಮುಂದಿನ ಜೈನ ಪುರಾಣ ಕವಿಗಳಿಗೆ ಒಂದು ಶ್ರೇಷ್ಠ ಮಾದರಿಯಾಯಿತು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.