ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಹಳೇವೂರು ಗ್ರಾಮದಲ್ಲಿ ನೆಲೆಸಿರುವ 'ಹಳೇವೂರಮ್ಮ ದೇವಿ’ - ದೇವಾಲಯದ ಪ್ರಾಚೀನತೆ, ಇತಿಹಾಸ ಹಾಗೂ ಐತಿಹ್ಯಗಳನ್ನು ಈ ಕೃತಿ ಒಳಗೊಂಡಿರುತ್ತದೆ. ಅಲ್ಲದೆ ಪ್ರಸ್ತುತ ಹಳೇವೂರಿನಲ್ಲಿರುವ ದೇವಾಲಯಗಳು, ಹುಲ್ಲೂರಮ್ಮ ದೇವಿಯ ಹಬ್ಬ, ಜಾತ್ರೆ, ರಥೋತ್ಸವ, ಕುದುರೆ ವಾಹನೋತ್ಸವ, ಉಯ್ಯಾಲೋತ್ಸವ, ತೆಪ್ಪೋತ್ಸವ, ಜೀರ್ಣೋದ್ದಾರ, ಹಳೇವೂರಮ್ಮನ ಮೇಲೆ ಹೇಳಿರುವ ಜಾನಪದ ಗೀತೆಗಳ ಕುರಿತ ಮಾಹಿತಿಗಳನ್ನು ಕೃತಿಕಾರರು ಇಲ್ಲಿ ನೀಡಿದ್ದಾರೆ.
ಲೇಖಕ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ಅವರು ಮೂಲತಃ ತುಮಕೂರು ಜಿಲ್ಲಿಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದರ್ಗದವರು. ಹುಟ್ಟಿದ್ದು 1976 ಅಕ್ಟೋಬರ್ 24ರಂದು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಹಾಕುತ್ತಿದ್ದು, ಗ್ರಾಮೀಣ ಬದುಕಿನ ಚಿತ್ರವನ್ನು ಹೆಕ್ಕಿ ತಮ್ಮ ಕೃತಿಗಳಲ್ಲಿ ನೈಪುಣ್ಯವಾಗಿ ಕಟ್ಟಿಕೊಡುತ್ತಾರೆ. ಅವರ ಮೊದಲ ಕವನ ಸಂಕಲನ ‘ಸಂಕೋಲೆ’ 2005ರಲ್ಲಿ ಪ್ರಕಟಣೆ ಕಂಡಿತು. ನಂತರ ‘ಕರುನಾಡಿಗೆನ್ನ ನಮನ, ನಾಡಪ್ರಭು ಕೆಂಪೇಗೌಡ ಮತ್ತು ಇತರ ನಾಟಕಗಳು, ಕನಸುಗಳು ಹೊತ್ತವರು ಹಾಗೂ ಇತರ ಕತೆಗಳು, ಹಳೇವೂರ ಮಡಿಲು, ಹುಲಿಯೂರ ಸೊಗಡು’ ಅವರ ಪ್ರಮುಖ ಕೃತಿಗಳು. ಪ್ರತಿ ತಿಂಗಳು ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ...
READ MORE