ಅಥರ್ವ ವೇದ: ಒಂದು ಅಧ್ಯಯನ- ಈ ಕೃತಿಯನ್ನು ಲೇಖಕ ಶೇಷ ನವರತ್ನ ಬರೆದಿದ್ದು, ಅಥರ್ವ ವೇದದ ವ್ಯಾಖ್ಯಾನ ನೀಡಿದ್ದಾರೆ. ಇಲ್ಲಿ 20 ಕಾಂಡಗಳೂ, 760 ಸೂಕ್ತಗಳೂ, 6000 ಮಂತ್ರಗಳನ್ನು ಒಳಗೊಂಡಿವೆ. ಗದ್ಯ ಹಾಗೂ ಪದ್ಯ ಶೈಲಿಯಲ್ಲಿ ರಚಿತವಾಗಿದೆ. ವಿವಾಹ ಪದ್ಧತಿ,ಶವಸಂಸ್ಕಾರ, ಗೃಹನಿರ್ಮಾಣ ಹೀಗೆ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳಿವೆ. ಮಾಟ ಮಂತ್ರ, ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದ ವಿಷಯಗಳ ಪ್ರಸ್ತಾಪವಿದೆ. ಧನುರ್ವಿದ್ಯೆ, ರೋಗನಿವಾರಣೋಪಾಯ, ಔಷಧಿಗಳ ವಿವರಣೆಯೂ ಇದೆ. ಯಜ್ಞಯಾಗಾದಿಗಳನ್ನು ವಿವರವೂ ಇದೆ. ವೇದಗಳ ರಚನೆಯಲ್ಲಿ ಕೊನೆಯದೇ ಅಥರ್ವ ವೇದ.
©2024 Book Brahma Private Limited.