ಲೇಖಕ ಸ್ವಾಮಿನಾಥರು ಸನೂತನ ದಾರ್ಶನಿಕರು ಕೃತಿಯಲ್ಲಿ ವಿವರಿಸಲಾಗಿರುವ ಋಷಿಮುನಿಗಳ ಪರಿಚಯ ಮಾಡಿಕೊಡಲಾಗಿದೆ. ಛಲದಂಕನಾದ ವಿಶ್ವಾಮಿತ್ರ, ವಿದ್ಯಾ ವಾಚಸ್ಪತಿ ಎಂದು ಕರೆಯಲ್ಪಟ್ಟ ಬೃಹಸ್ಪತಿ, ಮಹಾತ್ಯಾಗಿಯೆನಿಸಿದ ದಧೀಚಿ, ಆದಿಕವಿ ವಾಲ್ಮೀಕಿ, ಕುಲಪತಿ ಗೌತಮ, ಬ್ರಹ್ಮರ್ಷಿ ವಸಿಷ್ಠ, ವೇದವ್ಯಾಸ, ಸರ್ವಜ್ಞ ಪೀಠಾಧಿಪತಿ ಯಾಜ್ಞವಲ್ಕ್ಯ, ಕುಳ್ಳಮುನಿ ಅಗಸ್ತ್ಯರು, ಕೊಡಲಿರಾಮ ಪರಶುರಾಮ, ಲೋಕೋಪಕಾರಿ ನಾರದ, ದೇವಮಾನವ ಭಾರಧ್ವಾಜ ಮುನಿಗಳ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ಈ ಕೃತಿಯಲ್ಲಿ ಮಾಡಿಕೊಡಲಾಗಿದೆ.