ಲೇಖಕರಾದ ಸ್ವಾಮಿ ರಾವ ಕುಲಕರ್ಣಿ ಅವರ ಕೃತಿ ’ದಾಸ ದರ್ಶನ’.
ಭಕ್ತಿ ಮಾರ್ಗದಲ್ಲಿ ಭಗವಂತ ಮತ್ತು ಭಕ್ತರ ನಡುವೆ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವ, ಜೀವನ ವಿಧಾನವಾಗಿ ರೂಪುಗೊಂಡ ಸಾಹಿತ್ಯವೇ ದಾಸ ಸಾಹಿತ್ಯ ಜೀವನದ ಉನ್ನತೀಕರಣ ಅದರ ಮುಖ್ಯ ಗುರಿ ಎನ್ನುವ ಆಶಯವನ್ನು ’ದಾಸ ದರ್ಶನ’ ಕೃತಿ ಸಾರುತ್ತದೆ.
ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...
READ MORE