ಶ್ರೀನಿವಾಸ ಹಾವನೂರ ಅವರು ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಕೃತಿ ‘ಹರಿದಾಸರು ಹೊಗಳಿ ಹಾಡಿದ ಶ್ರೀವಾದಿರಾಜರು’ ಕೃತಿಯಲ್ಲಿ ಆಶೀರ್ವಚನ-ಶ್ರೀಸೋದೆಯ ಹಾಗೂ ಶ್ರೀ ಪೇಜಾವರದ ಶ್ರೀಗಳವರಿಂದ), ಕೃತಜ್ಞತೆಗಳು(ಪ್ರಕಾಶಕರಿಂದ), ಪ್ರಸ್ತಾವನೆ(ಸಂಪಾದಕರಿಂದ), ಶ್ರೀವಾದಿರಾಜರ ಪ್ರಭಾವಲಯದ ಹಬ್ಬುಗೆ, ದಾಸವರ್ಯರ ಸೂಚಿ, ಸ್ತುತಿಪರ ಹಾಡುಗಳ ಪರಿವಿಡಿ ಆ)ದೇವತಾ ಹಾಗೂ ಗುರುಸನ್ನಿಧಿ, ಆ) ಯತಿಗಳು ಸ್ತುತಿಸಿದ ಶ್ರೀವಾದಿರಾಜರು, ಇ) 18ನೆಯ ಶತಮಾನದ ದಾಸವರ್ಯರ ಹಾಡುಗಳು, 19ನೆಯ ಶತಮಾನದ ದಾಸರ ಹಾಡುಗಳು, ಉ) 20ನೇಯ ಶತಮಾನದ ದಾಸರ ಹಾಡುಗಳು, ಊ) ಕೆಲವು ವಿಶಿಷ್ಟ ಪದರಚನೆಗಳು, ಎ) ಮಂಗಳಾನ್ವಿತ ಪದಗಳು, ಭೂತರಾಜ ಸ್ತುತಿಪರ ಹಾಡುಗಳು, ಅನುಬಂಧಗಳು ಸಂಸ್ಕೃತದಲ್ಲಿರುವ ಸ್ತುತಿಪರ ಶ್ಲೋಕಗಳು, ಹಾಡುಗಳ ಮೊದಲ ಚರಣ ಸೂಚಿಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE