ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ) ಈ ಕೃತಿಯನ್ನು ಕೆ.ಜಿ. ಗಣೇಶ ಭಟ್ ಅವರು ರಚಿಸಿದ್ದು, ಇದು ಆಶ್ವಲಾಯನ ಪೂರ್ವಪ್ರಯೋಗ ಗ್ರಂಥವಾಗಿದೆ. ಷೋಡಶ ಮತ್ತು ಉಪಸಂಸ್ಕಾರಗಳ ಪ್ರಯೋಗ ವಿಧಿಗಳ ಜೊತೆಗೆ ಆಚರಣೆಯಲ್ಲಿರುವ ಅನೇಕ ಹೋಮವಿಧಿಗಳನ್ನೂ ಒಳಗೊಂಡಿದೆ. ಕನ್ನಡ ನಾಡಿನ ಸಾವಿರಾರು ಋಗ್ವೇದೀಯಾ ಪ್ರಯೋಕ್ತೃಗಳು ಇದನ್ನು ಉಪಯುಕ್ತ ಆಕರ ಗ್ರಂಥವಾಗಿ ಪರಿಗಣಿಸಿದ್ದಾರೆ.
ಶ್ರೀ ಕೆ. ಜಿ. ಗಣೇಶ ಭಟ್ಟರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಡಿನಲ್ಲಿ ಗ್ರಾಮದವರು. ಕಳೆದ ಮೂರುದಶಕಗಳಿಂದ ಶೃಂಗೇರಿಯಲ್ಲಿ ವಾಸಿಸುತ್ತಿದ್ದಾರೆ. ಶೃಂಗೇರಿಯ ಶ್ರೀಮಠೀಯ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ವೇದ, ಆಗಮ ಮತ್ತು ಸಾಹಿತ್ಯವನ್ನು ಅಭ್ಯಸಿಸಿದ್ದಾರೆ. ಪೌರೋಹಿತ್ಯ ವೃತ್ತಿಯಲ್ಲಿ ಎರಡು ದಶಕಗಳಿಗೂ ಮಿಗಿಲಾದ ಅನುಭವದ ಜೊತೆಗೆ, ನಾಲ್ಕು ಧಾರ್ಮಿಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ), ಪರ್ಜನ್ಯ ಕಲ್ಪಃ, ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ), ಸಂಧ್ಯಾವಂದನಮ್ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ...
READ MORE