ಸಾಲಿಗ್ರಾಮ, ತುಳಸಿ, ಶಂಖ, ಓಂಕಾರಗಳ ಮಾಹಿತಿಯನ್ನು ಸೂಚಿಸುವ ಗ್ರಂಥ-ಶುಭಂ ಭವತು. ಆದ್ಯ ರಾಮಾಚಾರ್ಯರು ಕೃತಿಯ ಕರ್ತೃ. ಮನುಷ್ಯನ ದೈಹಿಕ-ಮಾನಸಿಕ ಆರೋಗ್ಯದಲ್ಲಿ ಓಂಕಾರ, ಸಾಲಿಗ್ರಾಮ, ತುಳಸಿ ಶಂಖ ಇತ್ಯಾದಿ ಮಹತ್ವವಿದೆ. ಈ ಕುರಿತು ಯೋಗ, ಆಯುರ್ವೇದದಲ್ಲಿ ಮಾಹಿತಿ ಇದೆ. ತುಳಸಿ, ಶಂಖ, ಸಾಲಿಗ್ರಾಮಗಳ ಪೂಜೆ ಕೇವಲ ಮೂಢನಂಬಿಕೆಯಲ್ಲ; ಅವು ನೈಸರ್ಗಿಕವಾಗಿಯೂ ಸಮರ್ಥನೆಗಳನ್ನು ಹೊಂದಿವೆ. ಪುರಾಣದಲ್ಲೂ ಇವುಗಳ ಉಲ್ಲೇಖವಿದೆ ಎಂದು ಲೇಖಕರು ಸಮರ್ಥಿಸಿಕೊಂಡಿದ್ದಾರೆ.
ಹಿರಿಯ ಲೇಖಕ ಆದ್ಯ ರಾಮಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ. ತಂದೆ-ಸೇತುರಾಮಾ ಚಾರ್ ಆದ್ಯ, ತಾಯಿ-ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ ಪಡೆದ ಅವರು ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಪಡೆದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿದ್ದ ಅವರು ಹಲವು ಚಳವಳಿಯಲ್ಲಿ ಭಾಗಿಯಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ನಂತರ ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು ಆನಂತರ ಮೈಸೂರಿನ ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸಕ್ಕೆ ಸೇರಿದರು. ಈ ಸಂದರ್ಭದಲ್ಲಿ ...
READ MORE