ಋಗ್ವೇದದಲ್ಲಿ ಆಸಕ್ತರಾದವರಿಗೆ ನೆರವಾಗುವ ಉದ್ದೇಶದಿಂದ ರಚಿಸಲಾಗಿರುವ ಗ್ರಂಥವಿದು. ಋಗ್ವೇದದಲ್ಲಿ ಬರುವ ಪ್ರತಿಯೊಂದು ಶಬ್ದ ಬಗ್ಗೆಯೂ ನೀಡಿರುವ ವಿವರಣೆ ಪುಸ್ತಕದಲ್ಲಿದೆ. ಋಗ್ವೇದದ ಸರಿ ಸುಮಾರು 500 ಶಬ್ದಗಳನ್ನು ಹತ್ತು ಅಧ್ಯಾಯಗಳಲ್ಲಿ ವಿಂಗಡಿಸಿ ವಿವರಿಸಲಾಗಿದೆ. ಪ್ರತಿಯೊಂದು ಅಧ್ಯಾಯದಲ್ಲಿ ಅರವತ್ತು ಪದವರ್ಗ ಕುರಿತ ಚರ್ಚೆಯಿದೆ. ಘಟನೆಗಳ ಮತ್ತು ಯಜ್ಞ ಸಾಂಕೇತಿಕತೆಯನ್ನು ವಿವರಿಸಲಾಗಿದೆ. ಶಬ್ದಗಳ ಹೊರ ಅರ್ಥ ಹಾಗೂ ಸಾಂಕೇತಿಕ ಅರ್ಥವನ್ನೂ ನೀಡಿರುವುದು ವಿಶೇಷ.
’ವೇದಾಂಗ ವಿದ್ವಾನ್’ ಆರ್. ಎಲ್. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ. ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ, ...
READ MORE