ಗುರುವಿನ ಬಗ್ಗೆ ಅಲ್ಲಮರು, ಬಸವಣ್ಣನವರು ಹಾಗೂ ಶಂಕರರು ಹೇಳುವ ವಿಚಾರಗಳು ಇಲ್ಲಿವೆ. ಬೇಂದ್ರೆ ಅವರು ತಮ್ಮ ಗುರುಗಳ ಬಗ್ಗೆ ಬರೆದ ಕವನ, ಗೋಪಾಲರ ಜಗದ್ಗುರುವಿನ ಪದ್ಯ ಹಾಗೂ ‘ಕಾವ್ಯವಲ್ಲರಿ’ಯೂ ಅರ್ಥವಿವರಣೆಯ ಸಹಿತ ನೀಡಲಾಗಿದೆ.
ಲೀಲಾ ಪ್ರಕಾಶ್ ಕೆ., ಎಂ.ಎ., ಪಿಎಚ್.ಡಿ.(ಸಂಸ್ಕೃತ) ಪದವೀಧರರು. ಸುಶ್ರುತ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. 1959ರ ಜುಲೈ 18ರಂದು ಜನನ. ಡಾ. ಕೆ. ಕೃಷ್ಣಮೂರ್ತಿ, ಸರೋಜಮ್ಮಅವರ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ವಿಮಲಾ (2004)ರಲ್ಲಿ ಪ್ರಕಟವಾದ ಕಾದಂಬರಿ. ಅನಿವಾಸಿ ಹಾಗೂ ಇತರೆ ಕಥೆಗಳು (2008) ಕವನ ಸಂಕಲನ : ಸಮನ್ವಿತಾ, ಕಾವ್ಯವಲ್ಲರಿ (2006) ಕಥಾಸಂಕಲನಗಳನ್ನು ಹೊರತಂದಿದ್ದಾರೆ. ವೈದ್ಯಕೀಯ ಸುಭಾಷಿತ ಸಾಹಿತ್ಯ (2002) ಕನ್ನಡಕ್ಕೆ ಭಾಷಾಂತರಿಸಿದ್ದು, ಕನ್ನಡ ಭಗವದ್ಗೀತೆ (2005) ಪ್ರಕಟವಾಯಿತು. ಸಿರಿಗನ್ನಡ ಭಗವದ್ಗೀತೆ (ಕನ್ನಡಕ್ಕೆ ರೂಪಾಂತರ) ರಚಿಸಿದ್ದಾರೆ. ಹೊಯ್ಸಳ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' 'ಕೆ.ಎಸ್. ನರಸಿಂಹಸ್ವಾಮಿ ರಾಜ್ಯ ಪ್ರೇಮಕವಿ ಪ್ರಶಸ್ತಿ', ...
READ MORE