ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಲೋಕಪ್ರಿಯ ದೇವತಾ ಸ್ತುತಿಗಳು. ಸಾಮಾನ್ಯ ಜನರೂ ಸಹ ಹೇಳಬಹುದಾದ ಸ್ತುತಿಗಳನ್ನು ಸಂಗ್ರಹಿಸಿ, ಅವುಗಳ ಅರ್ಥಸಹಿತ ನೀಡಿದ್ದು ಈ ಕೃತಿಯ ಹೆಗ್ಗಳಿಕೆ. ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ಸಾರುವ ದೇವತಾ ಸ್ತುತಿಗಳು ಯಾವುದೇ ಧರ್ಮ-ಪಂಥವನ್ನು ಎತ್ತಿ ಹಿಡಿಯದೇ ಮಾನವ ಧರ್ಮದ ವಿಕಾಸವನ್ನು ತಮ್ಮ ಜೀವಾಳವಾಗಿಸಿಕೊಂಡಿವೆ. ಇಂತಹ ದೇವತಾ ಸ್ತುತಿಗಳನ್ನು ಉಚ್ಛರಿಸುವುದರಿಂದ ನಮ್ಮಲ್ಲಿ ಮಾನವೀಯ ಗುಣಗಳು ಬೆಳೆಯುತ್ತಾ ಹೋಗಿ ನಮ್ಮಲ್ಲಿರುವ ರಾಕ್ಷಸಿತನ ಇಲ್ಲವಾಗುತ್ತದೆ. ಹೀಗೆ ಪರಿಶುದ್ಧಗೊಳ್ಳುವುದೇ ಸಂಸ್ಕಾರ ಪಡೆಯುವ ಪ್ರಕ್ರಿಯೆಯಾಗುತ್ತದೆ. ಈ ನಿಟ್ಟಿನಲ್ಲಿ, ಈ ಕೃತಿಯು ಸಹಕಾರಿಯಾಗಿದೆ.
ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಹಿರಿಯ ಲೇಖಕರು. ಕೃತಿಗಳು: ಲೋಕಪ್ರಿಯ ದೇವತಾಸ್ತುತಿಗಳು, ಅಯೋಧ್ಯಾ ಅರಸ ಅಭಿರಾಮ, ಧರ್ಮ-ಸಂಸ್ಕೃತಿಯ ದರ್ಪಣ, ಕಿರಿಯ ಅರಿವಿಗೆ ಕಿರಿದಾದ ಸ್ತೋತ್ರಗಳು, ಅಜ್ಞಾನದ ಅಂಧಕಾರಕ್ಕೆ ಸುಜ್ಞಾನದ ದೀವಿಗೆ ...
READ MORE