‘ಕಾಶಿ ದರ್ಶನ’ ರವೀಂದ್ರ ಕೊಟಕಿ ಅವರ ಕ್ಷೇತ್ರ ದರ್ಶನವಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಕಾಶಿ ಧಾರ್ಮಿಕ ಪ್ರವಾಸಕ್ಕೆ ಹೊರಡುವ ಮೊದಲು ಕಾಶಿಯ ಧಾರ್ಮಿಕ- ಸಾಂಸ್ಕೃತಿಕ -ಸಾಮಾಜಿಕ ಹಿನ್ನೆಲೆಯ ಪರಿಚಯ ಅತ್ಯಗತ್ಯ ಕನಿಷ್ಠ ಮೂರು ರಾತ್ರಿ ಕಾಶಿಯಲ್ಲಿ ಕಳೆಯದೆ ಯಾತ್ರೆ ಅಪೂರ್ಣ. ಕಾಶಿಗೆ ಹೋಗಬೇಕಿರುವುದು ಕೇವಲ ಅಲ್ಲಿರುವ ವಿಶ್ವನಾಥ ಜ್ಯೋತಿರ್ಲಿಂಗದ ದರ್ಶನಕ್ಕಲ್ಲ. ಬದಲಾಗಿ ಪ್ರತಿಯೊಂದು ಜೀವಿಯು ತನ್ನನ್ನು ತಾನು ಹೊಸದೊಂದು ರೂಪದಲ್ಲಿ ತನ್ನನ್ನು ತಾನು ಕಂಡುಕೊಂಡು ಸಾಮಾಜಿಕವಾಗಿ, ಮಾನಸಿಕವಾಗಿ ಜೊತೆಗೆ ಧಾರ್ಮಿಕವಾಗಿಯೂ ತನ್ನನ್ನು ತಾನು ಸಶಕ್ತವಾಗಿಸಿ ಕೊಳ್ಳುವುದೇ ಕಾಶಿ ಯಾತ್ರೆಯ ಮೂಲ ಉದ್ದೇಶ ಮತ್ತು ಅದರ ಸಾರ್ಥಕತೆ. ಕಾಶಿಯ ಜೊತೆಗೆ ಗಯಾ ಶ್ರಾದ್ಧ, ತ್ರಿವೇಣಿ ಸಂಗಮದ ಸ್ನಾನ, ವೇಣಿ ದಾನ ಇವೆಲ್ಲವನ್ನು ನೀವು ನಡೆಸಿಕೊಂಡು ಬರಲು ಜೊತೆಗೆ ಈ ಯಾತ್ರೆಗೆ ತಗುಲುವ ವೆಚ್ಚವೂ ಸೇರಿದಂತೆ ಇತರೆಲ್ಲಾ ಮಾಹಿತಿಯನ್ನು ನಿಮಗೆ ನೀಡುವ ಪ್ರಯತ್ನವೇ ಈ 'ಕಾಶಿ ದರ್ಶನ.