ಮಹರ್ಷಿ ವೇದವ್ಯಾಸ ಪ್ರಣೀತ ಮತ್ತು ಶ್ರೀ ಶುಕಮುನಿ ಪ್ರೋಕ್ಷ ಶ್ರೀಮದ್ಬಾಗವತ ಕಥಾಮೃತ ಕೃತಿಯನ್ನು ಕನ್ನಡದಲ್ಲಿ ರಚಿಸಿದವರು ಎಚ್.ವಿ. ರಾಮಚಂದ್ರರಾವ್. ಶ್ರೀಮದ್ಬಾಗವತ ಅವರ ಕತೆಯನ್ನು ಚಿತ್ರಿಸಿರುವ ಕೃತಿ ಇದಾಗಿದೆ. ಭಗವದ್ಗೀತೆ ಕುರಿತು ನೂರೆಂಟು ಕೃತಿ ಪ್ರಕಟವಾಗಿದ್ದರೂ ಈ ಕೃತಿಯಲ್ಲಿಯ ಸರಳ ಭಾಷೆ, ನೀರೂಪಣೆ ಶೈಲಿಯಿಂದ ಓದುಗರನ್ನು ಸೆಳೆಯುತ್ತದೆ.
ಎಚ್.ವಿ. ರಾಮಚಂದ್ರರಾವ್ ಅವರು ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯವರು. ಶಾನಭೋಗ ಮನೆತನದವರು. ಚಿಕ್ಕಬಳ್ಳಾಪುರದಲ್ಲಿ ಎಸ್.ಎಸ್.ಎಲ್.ಸಿವರೆಗೆ ಓದಿದ್ದು, ಮೈಸೂರಿನ ರಿಯಾಸತ್ ಹಿಂದಿ ಪ್ರಚಾರ ಸಮಿತಿಯಲ್ಲಿ (1949) ರಾಷ್ಟ್ರಭಾಷಾ ವಿಶಾರದ ಪಾಸ್ ಮಾಡಿದರು. ಶಿಡ್ಲಘಟ್ಟದ ಬಿ. ವಿರೂಪಾಕ್ಷ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು.ಅಂಚೆ ತೆರಪಿನ ಶಿಕ್ಷಣದ ಮೂಲಕ ಬನಾರಸ್ ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪಾಸ್ ಮಾಡಿದರು. ನಂತರ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ನೇಮಕಗೊಂಡು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. ಹರಿಕಥಾಮೃತಸಾರ, ಶ್ರೀಮದ್ ಭಾಗವತ ಕಥಾಮೃತ, ಕಬೀರ ವಚನಾವಳಿ, ರಾಮಚರಿತ ಮಾನಸ ಒಂದು ರಸಯಾತ್ರೆ, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರೆ ಕಥೆಗಳು ಸೇರಿದಂತೆ ...
READ MORE