ಲಿಂಗಸೂಗೂರು ತಾಲೂಕಿನ ಚರಿತ್ರೆಯ ಕುರಿತು ಸಮಗ್ರವಾದ ಸಂಶೋಧನೆ ಕೈಗೊಂಡ ಡಾ. ಅಮರೇಶ ಯತಗಲ್‌ರವರು "ಕಸಬಾ ಲಿಂಗಸೂಗೂರಿನ ಅಧಿದೈವ ಶ್ರೀ ಕುಪ್ಪಿಭಿಮ" ಕೃತಿಯ ಮೂಲಕ ಕುಪ್ಪಿಭೀಮನ ದೇವಾಲಯ , ಮೂರ್ತಿ ಮಹಿಮೆ ಜಾತ್ರೆ ಉತ್ಸವ ಸಂಪ್ರದಾಯಗಳು ಮತ್ತುಅಲ್ಲಿನ ಸ್ಮಾರಕಗಳ ಕುರಿತ ದಾಖಲೆಗಳು , ಜನಪದ ಹಾಡುಗಳಲ್ಲಿ ಸ್ಥಳದ ಇತಿಹಾಸ , ಈ ಕೃತಿಯಲ್ಲಿ ಕಾಣಬಹುದಾಗಿದೆ. ಹೀಗೆ ಒಟ್ಟಾರೆ ಆ ಊರಿನ ಐತಿಹಾಸಿಕ , ಸಾಮಾಜಿಕ , ಧಾರ್ಮಿಕ ಅಂಶಗಳನ್ನು ಈ ಕೃತಿ ಒಳಗೊಂಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರಾಗಿರುವ ಅಮರೇಶ ಯತಗಲ್ ಅವರು ರಾಯಚೂರು ಜಿಲ್ಲೆಯ ಯತಗಲ್ ನವರು. ಸುರಪುರ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಇತಿಹಾಸ ಬರವಣಿಗೆಯಲ್ಲಿ ಆಸಕ್ತರಾಗಿದ್ದಾರೆ. ...
READ MORE