ಬಹುಪತ್ನಿತ್ವ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದು ಇಸ್ಲಾಮ್ ಧರ್ಮ ಮತ್ತು ಅದನ್ನು ಚಾಲ್ತಿಗೆ ತಂದದ್ದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಎಂಬಂತೆ ಇಂದು ಬಿಂಬಿಸಲಾಗುತ್ತಿದೆ. ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗಿನ ವಿವಿಧ ನಾಗರಿಕತೆಗಳಲ್ಲಿ ನಡೆದ ವಿವಾಹಗಳ ಕುರಿತು ಆಳವಾದ ಅಧ್ಯಯನ ನಡೆಸಿದರೆ ಎಲ್ಲಾ ಧರ್ಮೀಯರಲ್ಲೂ ಬಹುಪತ್ನಿತ್ವ ನೆಲೆಯಲ್ಲಿತ್ತು ಎಂಬುವುದು ಸ್ಪಷ್ಟವಾಗುತ್ತದೆ. ಅದಾಗ್ಯೂ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ವಿವಾಹಗಳೆ ಯಾಕೆ ವಿವಾದವಾದವು ಎಂಬುವುದು ಯಕ್ಷ ಪ್ರಶ್ನೆ. ವಾಸ್ತವದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಯಾರನ್ನು ವಿವಾಹವಾದರು? ಯಾವಾಗ ವಿವಾಹವಾದರು? ಮತ್ತು ಯಾತಕ್ಕಾಗಿ ವಿವಾಹವಾದರು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನ ಮಾಡುವಾಗ ಅವರ ಆದರ್ಶ ದಾಂಪತ್ಯ ಬದುಕು ಲೋಹ ಚುಂಬಕದಂತೆ ನಮ್ಮನ್ನು ಅತ್ತ ಸೆಳೆದು ಬಿಡುತ್ತದೆ. ಈ ಕೃತಿಯಲ್ಲಿ ಗ್ರಾಂಥಿಕ ಪುರಾವೆಗಳೊಂದಿಗೆ ಎಲ್ಲಾ ಪತ್ನಿಯರ ಬದುಕಿನ ವಿವಿಧ ಮಗ್ಗುಲುಗಳ ಬಗ್ಗೆ ಸುಲಭಗ್ರಾಹ್ಯ ಶೈಲಿಯಲ್ಲಿ ವಿವರಿಸಲಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಬಹುಪತ್ನಿತ್ವಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ನೀಡುವ ಈ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೊಂದು ಅನನ್ಯ ಕೊಡುಗೆಯಾಗಿದೆ.
©2025 Book Brahma Private Limited.