ಗೀತಾ ಗಾಂಭೀರ್ಯ -ಎಂಬುದು ಶ್ರೀರಂಗರು ಬರೆದ ಕೃತಿ. ಈ ಕೃತಿಯಲ್ಲಿ ಬಾಯ್ಮಾತಿನ ಬ್ರಹ್ಮಜ್ಞಾನ ಶೀರ್ಷಿಕೆಯಡಿ ಜಿಜ್ಞಾಸೆ ಇದೆ. ಅರ್ಜುನನ ವಿಷಾದ ಯೋಗ (ಹುಟ್ಟಿನ ಹೊಣೆಗಾರಿಕೆ, ಬೆಳವಣಿಗೆ ಎಂಬ ಬಂಧನ, ಮಾನವನ ಮರ್ಯಾದೆ, ಪಾಪಪುಣ್ಯದ ಪ್ರಪಂಚ, ಸುಖ ಮತ್ತು ಸಮಾಜ) ಅರ್ಜುನ ಪ್ರಸಾದ ಯೋಗ (ಕರ್ಮ ಮತ್ತು ಕರ್ತವ್ಯ, ಪ್ರಕೃತಿ-ಪುರುಷ, ಅವತಾರ-ಆತ್ಮೋದ್ಧಾರ, ಭಕ್ತಿ ಮತ್ತು ಶ್ರದ್ಧೆ, ಮೋಕ್ಷ-ಮುನ್ನೋಟ) ಗೀಥಾ ಶ್ಲೋಕ ಭಾಗ, ಮೂಲ ಶ್ಲೋಕಗಳಲ್ಲಿ ಚರ್ಚೆ ಸಾರಾಂಶ ಹೀಗೆ ವಿವೀಧ ಆಧ್ಯಾಯಗಳಡಿ ವಿಷಯವನ್ನು ಚರ್ಚೆಗೆ ಒಳಪಡಿಸಲಾಗಿದೆ. ಇದು ಒಂದರ್ಥದಲ್ಲಿ ಉತ್ತಮವಾದ ಸಮಾಜಶಾಸ್ತ್ರವೇ ಆಗಿದೆ ಎಂದು ಇಲ್ಲಿ ಅಭಿಪ್ರಾಯಪಡಲಾಗಿದೆ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE