ಲೇಖಕ ಶೇಷ ನವರತ್ ಅವರು ಬರೆದ ಕೃತಿ-ಹಿಂದೂ ಧರ್ಮದ ವಿರಾಟ್ ಸ್ವರೂಪ. ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಎಂದು ಹೇಳಲಾಗುತ್ತದೆ. ಈ ಧರ್ಮದ ಬಹು ಮುಖ್ಯ ಕೊಡುಗೆ ಎಂದರೆ ಅಧ್ಯಾತ್ಮಿಕತೆ. ಅದನ್ನು ವಿಶ್ವಕ್ಕೆ ನೀಡಿದ್ದು. ಧರ್ಮದ ಪರಿಕಲ್ಪನೆ ಕುರಿತು ಇಲ್ಲಿ ನಡೆದಷ್ಟು ಜಿಜ್ಞಾಸೆ ಬೇರೆ ಯಾವ ಧರ್ಮದಲ್ಲೂ ನಡೆದಿಲ್ಲ. ಆದ್ದರಿಂದ, ಈ ಧರ್ಮದ ವಿರಾಟ್ ಸ್ವರೂಪವನ್ನು ಲೇಖಕರು ಈ ಕೃತಿಯಲ್ಲಿ ದರ್ಶಿಸಿದ್ದಾರೆ. ಹಿಂದೂ ಧರ್ಮವು ಕೇವಲ ಧಾರ್ಮಿಕ ಮಾತ್ರವಲ್ಲ; ವೈಜ್ಞಾನಿಕ ಚಿಂತನೆಯನ್ನೂ ಒಳಗೊಂಡಿದೆ ಎಂಬ ಬಗ್ಗೆಯೂ ವಿವರಣೆ ಒಳಗೊಂಡಿದೆ.
ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು. ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ). ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...
READ MORE