ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ) ಈ ಪುಸ್ತಕವು ಋಗ್ವೇದ ಶಾಖೆಯ ಶ್ರದ್ಧಾವಂತ ಆಸ್ತಿಕನು ಪ್ರತಿದಿನವೂ ಆಚರಿಸಬೇಕಾದ ಧಾರ್ಮಿಕ ಕರ್ಮಗಳ ಪ್ರಯೋಗಗಳನ್ನು ಒಳಗೊಂಡಿದೆ. ಈ ಕೃತಿಯನ್ನು ಕೆ.ಜಿ. ಗಣೇಶ ಭಟ್ ಶೃಂಗೇರಿ ಅವರು ಬರೆದಿದ್ದು, ಪ್ರತಿಯೊಂದು ಕರ್ಮಗಳಿಗೂ ಪ್ರಮಾಣಗ್ರಂಥಗಳ ಉಲ್ಲೇಖ ನೀಡಿರುವುದು ವಿಶೇಷ.
ಶ್ರೀ ಕೆ. ಜಿ. ಗಣೇಶ ಭಟ್ಟರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಡಿನಲ್ಲಿ ಗ್ರಾಮದವರು. ಕಳೆದ ಮೂರುದಶಕಗಳಿಂದ ಶೃಂಗೇರಿಯಲ್ಲಿ ವಾಸಿಸುತ್ತಿದ್ದಾರೆ. ಶೃಂಗೇರಿಯ ಶ್ರೀಮಠೀಯ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ವೇದ, ಆಗಮ ಮತ್ತು ಸಾಹಿತ್ಯವನ್ನು ಅಭ್ಯಸಿಸಿದ್ದಾರೆ. ಪೌರೋಹಿತ್ಯ ವೃತ್ತಿಯಲ್ಲಿ ಎರಡು ದಶಕಗಳಿಗೂ ಮಿಗಿಲಾದ ಅನುಭವದ ಜೊತೆಗೆ, ನಾಲ್ಕು ಧಾರ್ಮಿಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ), ಪರ್ಜನ್ಯ ಕಲ್ಪಃ, ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ), ಸಂಧ್ಯಾವಂದನಮ್ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ...
READ MORE