ತುಂಗಾ ತೀರದ ಮಂತ್ರಾಲಯ ಕ್ಷೇತ್ರದ ಗುರು ರಾಘವೇಂದ್ರ ರಾಯರ ಮಹಿಮೆಯನ್ನು ವಿವರಿಸುವ ವಿಶಿಷ್ಟ ಪುಸ್ತಕ. ಜನಮನದಲ್ಲಿ ನೆಲೆಸಿರುವ ಗುರುರಾಯರ ಕುರಿತ ಸಂಗತಿಗಳನ್ನು ಅಕ್ಷರಕ್ಕೆ ಇಳಿಸುವ ಕೆಲಸವನ್ನು ಯು.ಪಿ. ಪುರಾಣಿಕ್ ಅವರು ಮಾಡಿದ್ದಾರೆ. ಈ ಪುಸ್ತಕ 23 ಅಧ್ಯಾಯಗಳಲ್ಲಿದೆ. ರಾಘವೇಂದ್ರರ ಜೀವನ ಚರಿತ್ರೆ, ಅವತಾರ, ರಾಯರ ವಿಚಾರಧಾರೆ, ಪವಾಡಗಳನ್ನು ಕುರಿತು ಲೇಖಕರು ವಿವರವಾಗಿ ಬರೆದಿದ್ದಾರೆ. ಗುರುರಾಯರನ್ನು ಕುರಿತು ಸಂಪೂರ್ಣ ಮಾಹಿತಿ ನೀಡುವ ಲೇಖಕರ ಪ್ರಯತ್ನ ಶ್ಲಾಘನೀಯ. ರಾಘವೇಂದ್ರರ ವಂಶಾವಳಿ, ರಾಯರ ಬೃಂದಾವನ ಪ್ರವೇಶ ಹಾಗೂ ನಂತರ ನಡೆದ ಪವಾಡಗಳು ಕುತೂಹಲ ಹುಟ್ಟಿಸುವ ಹಾಗಿವೆ.
ಕನ್ನಡದ ಪ್ರಮುಖ ಆರ್ಥಿಕ ವಿಷಯಗಳ ಬರಹಗಾರರಾಗಿರುವ ಯು.ಪಿ.ಪುರಾಣಿಕ ಅವರು ಮೂಲತಃ ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದವರಾದರೂ, ಬೆಂಗಳೂರಿನಲ್ಲಿ ನೆಲೆಸಿದವರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕರು ಹಾಗೂ ದಿ ಬೆಂಗಳೂರು ಸಿಟಿ ಕೋ -ಆಪರೇಟಿವ್ ಬ್ಯಾಂಕ್ ನ ವೃತ್ತಿಪರ ನಿರ್ದೇಶಕರು. ಬ್ಯಾಂಕಿಂಗ್ ಸಾಕ್ಷರತೆ ಹಾಗೂ ವಿತ್ತೀಯ ಸೇರ್ಪಡೆ ವಿಚಾರಗಳಲ್ಲಿ ಸುಮಾರು ಒಂದು ಸಾವಿರ ಅಂಕಣ ಲೇಖನಗಳನ್ನು ಕನ್ನಡದಲ್ಲಿ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದೇ ವೇಳೆ ಬ್ಯಾಂಕಿಂಗ್ ಹಾಗೂ ಹಣಕಾಸು ತಜ್ಞರಾಗಿ ಚಂದನ ಟಿವಿ ಹಾಗೂ ಆಕಾಶವಾಣಿಯಲ್ಲಿ ಫೋನ್ ಇನ್ ಕಾರ್ಯಕ್ರಮವನ್ನೂ ನಡೆಸುತ್ತಿದ್ದರು. ಪುರಾಣಿಕ ಅವರು ಕನ್ನಡದಲ್ಲಿ ...
READ MORE