ಪ್ರೊ. ಎಸ್.ಎಲ್. ಶೇಷಗಿರಿ ರಾವ್ ಅವರು ಇಂಗ್ಲಿಷ್‌ನಲ್ಲಿ ಬರೆದ ಕೃತಿಯನ್ನು ಜಿ.ಎನ್. ರಂಗನಾಥ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಲ್ಕು ಸಂಪುಟಗಳಲ್ಲಿ ಅನುವಾದವಾಗಿರುವ ಈ ಕೃತಿಯ ಎರಡನೇ ಸಂಪುಟ ಇದಾಗಿದೆ. ಇದರಲ್ಲಿ ಎರಡು ಪರ್ವಗಳಿವೆ. ಒಂದು ಅರಣ್ಯ ಪರ್ವ ಹಾಗೂ ಎರಡನೇಯದ್ದು ವಿರಾಟ ಪರ್ವ. ಅರಣ್ಯ ಪರ್ವದಲ್ಲಿ ಕಾಮಧೇನುವಿನ ಕಥೆ, ಪ್ರಹ್ಲಾದನ ಕಥೆ, ನಳ ದಮಯಂತಿಯರ ಕಥೆ, ಅಗಸ್ತ್ಯ ಮತ್ತು ಇಲ್ವಲ ಸಹೋದರರ ಕಥೆ, ಪರಶುರಾಮ ಮತ್ತು ಶ್ರೀರಾಮರ ಕಥೆ, ದಧೀಚಿಯ ಕಥೆ, ಅಗಸ್ತ್ಯ ಮತ್ತು ವಿಂಧ್ಯ ಪರ್ವತದ ಕಥೆ, ಭಗೀರಥನ ಕಥೆ, ಋಷ್ಯಶೃಂಗನ ಕಥೆ, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಕಥೆ, ಶಿಬಿಯ ಕಥೆ, ನರಕಾಸುರನ ಕಥೆ, ಅಗಸ್ತ್ಯ ಮತ್ತು ಕುಬೇರರ ಕಥೆ, ನುಷನ ಕಥೆ, ಮನು ಮತ್ತು ಬೃಹತ್ ನೌಕೆಯ ಕಥೆ, ಧರ್ಮವ್ಯಾಧನ ಕಥೆ, ಮುದ್ಗಲರ ಕಥೆ, ಶ್ರೀರಾಮನ ಕಥೆ ಹಾಗೂ ಸಾವಿತ್ರಿಯ ಕಥೆಯಿದೆ.
ವಿರಾಟ ಪರ್ವದಲ್ಲಿ ಛದ್ಮವೇಷದ ಆಯ್ಕೆ, ಧೌಮ್ಯರ ಉಪದೇಶ, ಕೊನೆಯ ಸಿದ್ಧತೆಗಳು, ವಿರಾಟನ ಅರಮನೆಯಲ್ಲಿ, ಅಪ್ರತಿಮನಾದ ಮಲ್ಲ, ದ್ರೌಪದಿಗೆ ಕೀಚಕನ ಕಿರುಕುಳ, ನನಗೆ ನೀನೊಬ್ಬನೇ ಗತಿ, ಕೀಚಕನು ದಂಡ ತೆತ್ತ, ಅವನ ಸಂಬಂಧಿಕರಿಗೂ ಸಹ, ಗೋಗ್ರಹಣ, ಪಾರುಗಾಣಿಸಿದ ಪಾಂಡವರು, ಸಾರಥಿಯಾಗಿ ಬೃಹನ್ನಳೆ, ನಾನು ಅರ್ಜುನ, ಮಂತ್ರಾಲೋಚನೆ, ಯುದ್ಧ ಹಾಗೂ ಹೀಗೊಂದು ಪರಿಣಯ ಕುರಿತು ವಿವರಣೆ ನೀಡಲಾಗಿದೆ.
©2024 Book Brahma Private Limited.