‘ಶ್ರೀಆದಿ ಚುಂಚನಗಿರಿ’ ಕೆ.ಆರ್. ಕೃಷ್ಣಸ್ವಾಮಿ ಅವರ ಜನಪದ ಭಕ್ತಿಗೀತೆಗಳ ಸಂಕಲನವಾಗಿದೆ. ಈ ಕೃತಿಯು ತಿಳಿಸುವಂತೆ, ಜಾನಪದ ಸಾಹಿತ್ಯ ನಮ್ಮ ಸಾಹಿತ್ಯ, ಜೀವನದ ಬೆನ್ನೆಲುಬು. ನಮ್ಮ ಜನರ ಬಾಳು, ಸಂಸ್ಕೃತಿ, ಭಗವದ್ಭಕ್ತಿ, ರಸಿಕತೆ, ಕಷ್ಟಕಾರ್ಪಣ್ಯ ಗಳ ದರ್ಪಣವಾಗಿ ಜನಪದ ಹೊರಹೊಮ್ಮಿದೆ. ಪ್ರಾಚೀನ ಕನ್ನಡ ಸಾಹಿತ್ಯವೂ ಹಳ್ಳಿಗರ ನುಡಿಮುತ್ತುಗಳನ್ನು ಬಳಸಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ಜಾನಪದ ಗೀತೆಗಳು ಕಥೆಗಳು ಹೊಸ ಬೆಳಕನ್ನು, ಹೊಸ ಉಸಿರನ್ನು ನೀಡಬಲ್ಲವು ಎಂಬುವುದನ್ನು ತಿಳಿಸುತ್ತದೆ.
ಈ ಕೃತಿಯೊಳಗಿನ ಅಧ್ಯಾಯಗಳ ವಿವರಗಳು; ಎಲ್ಲವನೋ ಶಿವನೆಲ್ಲವನೋ!, ಬೇಗ ಚುಂಚನಗಿರಿಯ ಸಿರಿ ಮಠ ಕಟ್ಟಲೆ, ಸುತ್ತಮುತ್ತ ಕೋಲು ಕೊಡಿ ಆದಿ ಭೇರುವಗೆ ಭೈರುವನ ರಥಗನ ಬನ್ನಿರೋ ಭರುವ ಚುಂಚನಗಿರಿಯಲ್ಲಿ ನೆಲೆಗೊಂಡ ! ಕೆನ್ನೆಮೇದಾರು ಕಡಿದಾರು, ಚೋಳೂರಿಗ್ವಾಲೆ ಬರೆದಾನು, ಜಗವ ತಲ್ಲಣಿಸಿ ಹರಿದಾವೆ. ಬೆಟ್ಟದಲ್ಲಿ ಬೀಡಿಕೆ ಬಿಡುತ್ತಾರೆ ಚುಂಚನಗಿರಿಯಸ್ವಾಮಿ ಭೈರಪ್ಪ ಬನಕಾಗಿ ಸ್ವಾಮಿಯ ಮಠವ ಹೋಗಿ ನೋಡಾನ ಬನ್ನಿ, ಮನಸ್ವಾಮಿ ಭೈರುವ ಬರುತ್ತಾನೆ - ಮಾತುಳ್ಳ ಜೋಗಿ ಉಣು ಬಾರೋ, ನವಾಪ್ಪಾನ ಗುರುವ ನೆನೆದವ, ಭೈರುವ ಮದಲಿಂಗನಾಗಿ ಬರುತಾನೆ, ಚುಂಚನಗಿರಿಯಲ್ಲಿ ನಮಗರು ನಮಸ್ಕಾರು ನಂಟರು, ಹರಿಸೇವೆ ಚೆಂದ ಗಿರಿಮ್ಯಾಲೆ ಸುತ್ತಿ ಬನ್ನಿ ನನ್ನ ಶಿಖರಾನ, ನಿನ್ ಗಿರಿಮೇಲೆ ಹಾಲ ಎರೆದೇವು, ನಗಾರಿ ಬಡಿದಾವೊ ಆಯ್ಯನ ಗಿರಿ ಮೇಲೆ, ಹೆಸರಿಗೆ ದೊಡ್ಡದು ಗುಡಿದೂರ, ಗುಡಿಯ ಒಳಗವನೆ ಭೈರುವಸ್ವಾಮಿ ಇರುವುದು ಕೈಲಾಸ, ಮುತ್ತು ಕಂಡ ಗಂಗಾಧರ ಮನಸೋತವನ್ನು ಒಳಗೊಂಡಿದೆ.
©2024 Book Brahma Private Limited.