ಇದು ಜಾನ್ ಮಿಲ್ಟನ್‌ನ ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರಿಗೇನ್ಡ್‌ನ ಮೊದಲ ಕನ್ನಡ ಗದ್ಯ ಅನುವಾದವಾಗಿದೆ. ಇದು ಮಿಲ್ಟನ್‌ನ ಮುನ್ನೂರು ವರ್ಷಗಳ ನಂತರ ಯಾವುದೇ ಭಾರತೀಯ ಭಾಷೆಗಳಿಗೆ ಮಿಲ್ಟನ್‌ನ ಮಹಾಕಾವ್ಯದ ಮೊದಲ ಅನುವಾದವಾಗಿದೆ. ಇದು ಮನುಷ್ಯನ ದೇವರ ಅವಿಧೇಯತೆ, ಸ್ವರ್ಗದಿಂದ ಸೈತಾನನ ಪತನ, ಆಡಮ್ ಮತ್ತು ಈವ್ ದೇವರ ಚಿತ್ತವನ್ನು ಉಲ್ಲಂಘಿಸುವುದು, ದೇವರಿಂದ ಅವರ ಶಿಕ್ಷೆಗೆ ಸಂಬಂಧಿಸಿದೆ. ಭೂಮಿಯ ಮೇಲೆ ಯೇಸುಕ್ರಿಸ್ತನ ಆಗಮನ ಮತ್ತು ಆಡಮ್ ಮತ್ತು ಈವ್ ಅವರ ಉಳಿಸುವಿಕೆ ಮತ್ತು ಸ್ವರ್ಗಕ್ಕೆ ಹಿಂತಿರುಗುವುದು ಪುಸ್ತಕದ ಹೂರಣವಾಗಿದೆ.
ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್) ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು. ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು. ಅನುವಾದಿತ ಕೃತಿಗಳು: ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...
READ MORE